ಲಂಡನ್ (ಐಎಎನ್‌ಎಸ್): ವಿಶ್ವಖ್ಯಾತಿ ಗಳಿಸಿದ್ದ `ಸ್ಪೈಸ್ ಗರ್ಲ್ಸ್~ ಬ್ಯಾಂಡ್ ಮತ್ತೊಮ್ಮೆ ಒಂದಾಗಲಿದೆ. ಅದಕ್ಕೆ ಕಾರಣ ಲಂಡನ್ ಒಲಿಂಪಿಕ್ಸ್. ಕೂಟದ ಮುಕ್ತಾಯ ಸಮಾರಂಭದಲ್ಲಿ ಐವರು ಗಾಯಕಿಯರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೆರಿ ಹ್ಯಾಲಿವೆಲ್ (ಜಿಂಜರ್ ಸ್ಪೈಸ್), ಎಮ್ಮಾ ಬಂಟಾನ್ (ಬಾಬಿ ಸ್ಪೈಸ್), ಮೆಲಾನೀ ಚಿಶೋಲ್ಮ್ (ಸ್ಪೋರ್ಟ್ಸ್ ಸ್ಪೈಸ್), ಮೆಲಾನೀ ಬ್ರೌನ್ (ಸ್ಕೇರಿ ಸ್ಪೈಸ್) ಹಾಗೂ ವಿಕ್ಟೋರಿಯಾ ಬೆಕಮ್ (ಪಾಷ್ ಸ್ಪೈಸ್) ಅವರನ್ನು ದೀರ್ಘ ಕಾಲದ ನಂತರ ಒಟ್ಟಿಗೆ ನೋಡುವ ಅವಕಾಶ ಸಿಗಲಿದೆ.
ಆಗಸ್ಟ್ 12ರಂದು ಕೊನೆಗೊಳ್ಳುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಭವ್ಯವಾಗಿಯೇ ತೆರೆ ಎಳೆಯುವುದು ಸಂಘಟಕರ ಉದ್ದೇಶ. ಆದ್ದರಿಂದ ಸ್ಪೈಸ್ ಗರ್ಲ್ಸ್ ಜೊತೆಗೆ ಜಾರ್ಜ್ ಮೈಕಲ್, ಜೆಸ್ಸೀ ಜೆ ಅವರಂಥ ಖ್ಯಾತ ಪಾಪ್ ಸ್ಟಾರ್‌ಗಳಿಂದ ಸಮಾರಂಭದ ಹೊಳಪು ಹೆಚ್ಚಿಸಲು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.