ADVERTISEMENT

ಕಬಡ್ಡಿಯಲ್ಲಿ ಚಿನ್ನ ಗೆದ್ದ ಭಾರತ

​ಪ್ರಜಾವಾಣಿ ವಾರ್ತೆ
Published 22 ಜೂನ್ 2012, 19:10 IST
Last Updated 22 ಜೂನ್ 2012, 19:10 IST

ನವದೆಹಲಿ (ಪಿಟಿಐ): ಭಾರತ ಮಹಿಳಾ ಕಬಡ್ಡಿ ತಂಡದವರು ಚೀನಾದ ಹೈಯಾಂಗ್‌ನಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಬೀಚ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಪುರುಷರು ಕಂಚಿನ ಪದಕ ಗೆದ್ದಿದ್ದಾರೆ.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿಭಾರತ ತಂಡ 54-25 ಪಾಯಿಂಟ್‌ಗಳಿಂದ ಥಾಯ್ಲೆಂಡ್ ತಂಡವನ್ನು ಮಣಿಸಿತು. ಆರಂಭದಿಂದಲೇ ಪಾರಮ್ಯ ಸಾಧಿಸಿದ ವಿಜಯಿ ತಂಡದವರು ವಿರಾಮದ ವೇಳೆಗೆ 27-12ರಲ್ಲಿ ಮುಂದಿದ್ದರು.

ಭಾರತ ತಂಡದಲ್ಲಿ ಮಮತಾ ಪೂಜಾರಿ, ಮಾರ್ಷಲ್ ಮೇರಿ, ಪ್ರಿಯಾಂಕಾ, ಪ್ರಿಯಾಂಕಾ ನೇಗಿ, ಕವಿತಾ ದೇವಿ ಹಾಗೂ ರಂದೀಪ್ ಕೌರ್ ಇದ್ದರು.

ಈ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಹಿಳೆಯರ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.