ADVERTISEMENT

ಕರ್ನಾಟಕ ಲಾಯನ್ಸ್‌ಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST
ಕರ್ನಾಟಕ ಲಾಯನ್ಸ್‌ಗೆ ನಿರಾಸೆ
ಕರ್ನಾಟಕ ಲಾಯನ್ಸ್‌ಗೆ ನಿರಾಸೆ   

ನವದೆಹಲಿ (ಪಿಟಿಐ): ಕರ್ನಾಟಕ ಲಾಯನ್ಸ್ ತಂಡದವರು ಚೊಚ್ಚಲ ವಿಶ್ವ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡರು.

ಇಲ್ಲಿನ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ವಿಜಾರ್ಡ್ಸ್ 3-2ಗೋಲುಗಳಿಂದ ಕರ್ನಾಟಕ ತಂಡವನ್ನು ಸೋಲಿಸಿತು.

 ವಿಜಯಿ ತಂಡ ವಿರಾಮದ ವೇಳೆಗೆ 3-0ಗೋಲುಗಳ ಮುನ್ನಡೆ ಹೊಂದಿತ್ತು. ವಿಜಯಿ ತಂಡದ ವಿಕ್ರಮಜಿತ್ ಸಿಂಗ್ 2ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಪಾಕಿಸ್ತಾನದ ಫಾರ್ವರ್ಡ್ ಶಕೀಲ್ ಅಬ್ಬಾಸ್ 19ನೇ ನಿಮಿಷದಲ್ಲಿ ಗೋಲು ಗಳಿಸಿ ಈ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

ಇದಕ್ಕೆ ತಕ್ಕ ಪೈಪೋಟಿ ಒಡ್ಡಿದ ಎದುರಾಳಿ ಕರ್ನಾಟಕ ತಂಡದ ಧನರಾಜ್ ಪಿಳ್ಳೈ 36ನೇ ನಿಮಿಷ ಹಾಗೂ ರವಿಪಾಲ್ ಸಿಂಗ್ 48ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಆದ್ದರಿಂದ ಪಂದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ಡೆಲ್ಲಿ ತಂಡದ ನಾಯಕ ರಾಜ್ಪಾಲ್ ಸಿಂಗ್ 51ನೇ ನಿಮಿಷದಲ್ಲಿ ಗೋಲು ತಂದಿಟ್ಟರು. ಇದು ಕರ್ನಾಟಕದ ನಿರಾಸೆಗೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.