ADVERTISEMENT

ಕೊಡವ ಕುಟುಂಬಗಳ ಹಾಕಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ನಾಪೋಕ್ಲು ಜನರಲ್‌ ತಿಮ್ಮಯ್ಯ ಮೈದಾನದಲ್ಲಿ ಭಾನುವಾರ ಕೊಡವ ಕುಟುಂಬಗಳ 22ನೇ ವರ್ಷದ ‘ಹಾಕಿ ನಮ್ಮೆಗೆ’ ಭಾರತ ಹಾಕಿ ತಂಡದ ಮಾಜಿ ನಾಯಕ ಮೊಳ್ಳೇರ ಪಿ. ಗಣೇಶ್ ಚಾಲನೆ ನೀಡಿದರು
ನಾಪೋಕ್ಲು ಜನರಲ್‌ ತಿಮ್ಮಯ್ಯ ಮೈದಾನದಲ್ಲಿ ಭಾನುವಾರ ಕೊಡವ ಕುಟುಂಬಗಳ 22ನೇ ವರ್ಷದ ‘ಹಾಕಿ ನಮ್ಮೆಗೆ’ ಭಾರತ ಹಾಕಿ ತಂಡದ ಮಾಜಿ ನಾಯಕ ಮೊಳ್ಳೇರ ಪಿ. ಗಣೇಶ್ ಚಾಲನೆ ನೀಡಿದರು   

ನಾಪೋಕ್ಲು (ಕೊಡಗು ಜಿಲ್ಲೆ): ಕೊಡವ ಕುಟುಂಬಗಳ 22ನೇ ವರ್ಷದ ಹಾಕಿ ಉತ್ಸವಕ್ಕೆ ನಾಪೋಕ್ಲು ಚೆರಿಯಪರಂಬುವಿನ ಕಾವೇರಿ ನದಿ ತಟದ ಜನರಲ್‌ ತಿಮ್ಮಯ್ಯ ಮೈದಾನದಲ್ಲಿ ಭಾನುವಾರ ಅದ್ದೂರಿ ಚಾಲನೆ ದೊರೆಯಿತು.

ಕೊಡಗು ಸೇರಿದಂತೆ ವಿವಿಧೆಡೆಯಿಂದ ಹಾಕಿಪ್ರೇಮಿಗಳ ದಂಡು ಮೈದಾನದತ್ತ ಹರಿದು ಬಂದಿತ್ತು. ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ, ಭಾರತ ಹಾಕಿ ತಂಡದ ಮಾಜಿ ನಾಯಕ ಮೊಳ್ಳೇರ ಪಿ.ಗಣೇಶ್ ಹಾಗೂ ಹೆಚ್ಚುವರಿ ಅಡ್ವೋಕೇಟ್‌ ಜನರಲ್ ಅಜ್ಜಿಕುಟ್ಟೀರ ಎಸ್‌.ಪೊನ್ನಣ್ಣ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಕುಲ್ಲೇಟಿರ ಕುಟುಂಬದ ನೇತೃತ್ವದಲ್ಲಿ ಹಾಕಿ ಉತ್ಸವ ನಡೆಯುತ್ತಿದ್ದು, 333 ತಂಡಗಳು ನೋಂದಣಿ ಮಾಡಿಕೊಂಡಿವೆ. 33 ದಿನಗಳ ಉತ್ಸವ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.