ADVERTISEMENT

ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಸೈನಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST
ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಸೈನಾ
ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಸೈನಾ   

ನವದೆಹಲಿ (ಐಎಎನ್‌ಎಸ್):  ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅನಾರೋಗ್ಯದ ಕಾರಣದಿಂದಾಗಿ 2014ರ ಫೆಬ್ರುವರಿ ಯಲ್ಲಿ ನಡೆಯಲಿರುವ ಕೊರಿಯಾ ಓಪನ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಇತ್ತೀಚೆಗೆ ನೆಹ್ವಾಲ್ ರಾಷ್ಟ್ರೀಯ ಸೀನಿಯರ್ ಟೂರ್ನಿಯಿಂದಲೂ ಹಿಂದೆ ಸರಿಯುವ ತೀರ್ಮಾನ ಪ್ರಕಟಿಸಿದ್ದರು.

ವಿದೇಶಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಯಾವುದೇ ಕಾರಣ ನೀಡದೆ ಪಾಲ್ಗೊಳ್ಳುವ ಅವರು ರಾಷ್ಟ್ರೀಯ ಟೂರ್ನಿಯ ಸಂದರ್ಭ ದಲ್ಲಿ  ಮಾತ್ರ ಒಂದಿಲ್ಲೊಂದು ಕಾರಣ ನೀಡಿ ಹಿಂದೇಟು ಹಾಕುತ್ತಾರೆ ಎಂಬ ಆರೋಪ ಸೈನಾರನ್ನು ಸುತ್ತಿಕೊಂಡಿದೆ. ಕಳೆದ ಐದು  ಟೂರ್ನಿಗಳಲ್ಲಿ  ಒಂದರಲ್ಲೂ ಅವರು  ಭಾಗವಹಿಸ ದಿರುವುದು ಇದಕ್ಕೆ ಪುಷ್ಟಿ ನೀಡಿದಂತಿದೆ.

ಸೈನಾ ಕೊರಿಯಾ ಓಪನ್‌ ಟೂರ್ನಿಯಿಂದ ತಮ್ಮ ಪ್ರವೇಶವನ್ನು ಹಿಂಪಡೆಯುವಂತೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಗೆ (ಬಿಎಐ) ತಿಳಿಸಿದ್ದಾರೆ ಎಂದು ಉಪಾಧ್ಯಕ್ಷ ಟಿ.ಪಿ.ಎಸ್ ಪುರಿ ತಿಳಿಸಿದ್ದಾರೆ.

‘ನಾನು ಅನಾರೋಗ್ಯದಿಂದ ಬಳಲು ತ್ತಿದ್ದು, ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಸಮರ್ಥಳಾಗಿದ್ದೇನೆ. ಹೀಗಾಗಿ ನನ್ನ ಪ್ರವೇಶವನ್ನು ರದ್ದುಗೊಳಿಸಿ ಎಂದು ಸೈನಾ ತಿಳಿಸಿದ್ದಾರೆ. ನಾವು ಇದಕ್ಕೆ ಒಪ್ಪಿರಲಿಲ್ಲ ಆದರೆ ಕೆಮ್ಮು ಹಾಗೂ ಶೀತದಿಂದ ಬಳಲುತ್ತಿರುವ ವಿಚಾರ ತಿಳಿದು  ಅವರ ಮನವಿಯನ್ನು ಪುರಸ್ಕರಿಸಿದ್ದೇವೆ’ ಎಂದು ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.