ADVERTISEMENT

ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST
ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ
ಕ್ರಿಕೆಟ್: ಪೂರ್ವ ವಲಯಕ್ಕೆ ದುಲೀಪ್ ಟ್ರೋಫಿ   

ಇಂದೋರ್ (ಪಿಟಿಐ): ಪೂರ್ವ ವಲಯ ತಂಡದವರು ಇತಿಹಾಸ ಬರೆದಿದ್ದಾರೆ. ಕಾರಣ ಇದೇ ಮೊದಲ ಬಾರಿ ಈ ತಂಡದವರು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಹೋಳ್ಕರ್ ಕ್ರೀಡಾಂಗಣದಲ್ಲಿ ಮಂಗಳವಾರ ಕೊನೆಗೊಂಡ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಇನಿಂಗ್ಸ್ ಹಾಗೂ 20 ರನ್‌ಗಳಿಂದ ಕೇಂದ್ರ ವಲಯ ತಂಡವನ್ನು ಸೋಲಿಸಿತು. ಐದು ದಿನಗಳ ಪಂದ್ಯ ಮೂರೇ ದಿನಗಳಲ್ಲಿ ಮುಗಿದು ಹೋಯಿತು.

ಸಂಕ್ಷಿಪ್ತ ಸ್ಕೋರ್: ಕೇಂದ್ರ ವಲಯ: ಮೊದಲ ಇನಿಂಗ್ಸ್ 49.3 ಓವರ್‌ಗಳಲ್ಲಿ 133 (ನಮನ್ ಓಜಾ 44; ಅಶೋಕ್ ದಿಂಡಾ 29ಕ್ಕೆ4) ಹಾಗೂ 61 ಓವರ್‌ಗಳಲ್ಲಿ 217 (ಜಲಜ್ ಎಸ್.ಸಕ್ಸೇನಾ 46; ಶಮಿ ಅಹ್ಮದ್ 50ಕ್ಕೆ4); ಪೂರ್ವ ವಲಯ: ಮೊದಲ ಇನಿಂಗ್ಸ್ 110.1 ಓವರ್‌ಗಳಲ್ಲಿ 370 (ಅನುಸ್ತೂಪ್ ಮಜುಮ್ದಾರ್ 52, ವೃದ್ಧಿಮಾನ್ ಸಹಾ 170; ಭುವನೇಶ್ವರ್ ಕುಮಾರ್ 80ಕ್ಕೆ3). ಫಲಿತಾಂಶ: ಪೂರ್ವ ವಲಯ ತಂಡಕ್ಕೆ ಇನಿಂಗ್ಸ್ ಹಾಗೂ 20 ರನ್‌ಗಳ ಜಯ ಮತ್ತು ಚಾಂಪಿಯನ್ ಪಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.