ಹುಬ್ಬಳ್ಳಿ: ಎ. ರಘು (42 ರನ್, 30 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಭರ್ಜರಿ ಆಲ್‌ರೌಂಡ್ ಆಟದ ನೆರವಿನಿಂದ ಹೈದರಾಬಾದ್ ತಂಡ, ಭಾನುವಾರ ಮುಕ್ತಾಯಗೊಂಡ ಉತ್ತರ ಕರ್ನಾಟಕ ಅಂಗವಿಕಲರ ಕ್ರೀಡೆ ಹಾಗೂ ಕ್ಷೇಮಾಭಿವೃದ್ಧಿ ಸಂಸ್ಥೆ ಆಶ್ರಯದ ಅಂಗವಿಕಲರ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಿ `ಗಂಧರ್ವ ಟ್ರೋಫಿ~ಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಗರದ ಕರ್ನಾಟಕ ಜಿಮ್ಖಾನ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದು ತಮಿಳುನಾಡು ತಂಡವನ್ನು 5 ರನ್‌ಗಳಿಂದ ಮಣಿಸಿ ಪ್ಲೇಟ್ ಹಂತದ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ತಂಡ ನಿಗದಿತ 12 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 81 ರನ್ ಗಳಿಸಿತು. ತಮಿಳುನಾಡು 10.1 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟಾಯಿತು.
ಸ್ಕೋರ್ ವಿವರ: ಹೈದರಾಬಾದ್: 12 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 81 (ಎ. ರಘು 42; ಸುರೇಶ 15ಕ್ಕೆ3, ಕಣ್ಣದಾಸನ್ 10ಕ್ಕೆ 2); ತಮಿಳುನಾಡು: 10.1 ಓವರ್‌ಗಳಲ್ಲಿ 76ಕ್ಕೆ ಆಲೌಟ್ (ಡಿ. ಆ್ಯಂಟನಿ 29; ವೈ. ತಿರುಪತಿ 13ಕ್ಕೆ 3, ಎ. ರಘು 12ಕ್ಕೆ 2, ಬಾಲಕೃಷ್ಣ 13ಕ್ಕೆ 2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.