
ಪ್ರಜಾವಾಣಿ ವಾರ್ತೆಬೆಂಗಳೂರು: ಸ್ಥಳೀಯ ಗಾಲ್ಫರ್ ಅದಿತಿ ಅಶೋಕ್ ಇಲ್ಲಿ ನಡೆಯುತ್ತಿರುವ `ಕರ್ನಾಟಕ ಲೇಡಿಸ್ ಗಾಲ್ಫ್' ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಂಗಳೂರು ಗಾಲ್ಫ್ ಕ್ಲಬ್‌ನಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಅವರು 68 ಅವಕಾಶ ಬಳಸಿಕೊಂಡು ಉತ್ತಮ ಪ್ರದರ್ಶನ ತೋರಿದರು. ಅವರೀಗ ಒಟ್ಟು 139 (71 ಹಾಗೂ 68) ಸ್ಟ್ರೋಕ್‌ಗಳ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಗುರ್ಬಾನಿ ಸಿಂಗ್ (140 ಸ್ಟ್ರೋಕ್) ಎರಡನೇ ಸ್ಥಾನದಲ್ಲಿದ್ದಾರೆ.
ದೆಹಲಿಯ ಗೌರಿ ಮೋಂಗಾ ಕೂಡ ಉತ್ತಮ ಪ್ರದರ್ಶನ ತೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.