ADVERTISEMENT

ಗೇಲ್ ಪಂದ್ಯ ಕಸಿದುಕೊಂಡರು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 19:30 IST
Last Updated 21 ಏಪ್ರಿಲ್ 2012, 19:30 IST

ಮೊಹಾಲಿ (ಪಿಟಿಐ): ಸವಾಲಿನ ಮೊತ್ತ ಪೇರಿಸಿದರೂ ಗೆಲುವು ಪಡೆಯಲು ವಿಫಲವಾದದ್ದು ನಿರಾಸೆ ಉಂಟುಮಾಡಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪಿನ್ನರ್ ಪಿಯೂಷ್ ಚಾವ್ಲಾ ಹೇಳಿದ್ದಾರೆ.

ಮೊಹಾಲಿಯಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐದು ವಿಕೆಟ್‌ಗಳಿಂದ ಕಿಂಗ್ಸ್ ಇಲೆವೆನ್ ತಂಡವನ್ನು ಮಣಿಸಿತ್ತು.

`ಕ್ರಿಸ್ ಗೇಲ್ ಪಂದ್ಯವನ್ನು ನಮ್ಮ ಕೈಯಿಂದ ಕಿತ್ತುಕೊಂಡರು. ಬೌಲರ್‌ಗಳು ಕೊನೆಯವರೆಗೂ ಗೆಲುವಿಗಾಗಿ ಕಠಿಣ ಪ್ರಯತ್ನ ನಡೆಸಿದರು. ಆದರೆ ಗೇಲ್ ಅವರ ಬ್ಯಾಟಿಂಗ್ ಭಾರಿ ವ್ಯತ್ಯಾಸಕ್ಕೆ ಕಾರಣವಾಯಿತು~ ಎಂದು ಚಾವ್ಲಾ ಪ್ರತಿಕ್ರಿಯಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ್ದ ಕಿಂಗ್ಸ್ ಇಲೆವೆನ್ 163 ರನ್ ಪೇರಿಸಿತ್ತು. ಆರ್‌ಸಿಬಿ 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್ ಗಳಿಸಿ ಜಯ ಸಾಧಿಸಿತ್ತು. ಗೇಲ್ 56 ಎಸೆತಗಳಲ್ಲಿ 87 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.