ADVERTISEMENT

ಟೆನಿಸ್‌: ನಿಕ್ಷೇಪ್‌– ವ್ರೆಸಿನ್‌ಸ್ಕಿ ಜೋಡಿಗೆ ಸೋಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ಬೆಂಗಳೂರು: ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಹಾಗೂ ಲಿಥುವಾನಿಯದ ರಾಬರ್ಟ್‌  ವ್ರೆಸಿನ್‌ಸ್ಕಿ ಜೋಡಿ ದೋಹಾದ ಕತಾರ್‌ನಲ್ಲಿ ನಡೆಯು ತ್ತಿರುವ ಐಟಿಎಫ್‌ ಜೂನಿಯರ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ  ಸೋಲು ಕಂಡಿದೆ.

ಶುಕ್ರವಾರ ನಡೆದ  ನಾಲ್ಕರ ಘಟ್ಟದ ಪಂದ್ಯದಲ್ಲಿ ನಿಕ್ಷೇಪ್‌ ಹಾಗೂ ವ್ರೆಸಿನ್‌ಸ್ಕಿ  4–6, 6–3, 7–10ರಲ್ಲಿ ಇಟಲಿಯ ಸಚಾ ಮರ್ಜಟ್ಟಿ ಮತ್ತು ಎನ್ರಿಕೋ ಡೆಲ್ಲೆ ವಲ್ಲೆ  ಎದುರು ನಿರಾಸೆ ಅನುಭವಿ ಸಿ ದರು. ಎರಡನೇ ಸೆಟ್‌ನಲ್ಲಿ ಗೆದ್ದು ತಿರು ಗೇಟು ನೀಡಲು ಪ್ರಯತ್ನಿಸಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.