ADVERTISEMENT

ಟೆನಿಸ್: ವಶಿಷ್ಠ, ರಷ್ಮಿಕಾ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಬೆಂಗಳೂರು: ವಶಿಷ್ಠ ವಿ ಚೆರುಕು ಹಾಗೂ ರಷ್ಮಿಕಾ ರಂಜನ್ ಇಲ್ಲಿ ನಡೆಯುತ್ತಿರುವ ಎಐಟಿಎ ಟ್ಯಾಲೆಂಟ್ ಸೀರಿಸ್ ರಾಷ್ಟ್ರೀಯ ರ‌್ಯಾಂಕಿಂಗ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 16 ವರ್ಷ ವಯಸ್ಸಿನೊಳಗಿನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಮಹಿಳಾ ಸೇವಾ ಸಮಾಜ ಟೆನಿಸ್ ಕ್ಲಬ್ ಕೋರ್ಟ್‌ನಲ್ಲಿ ಗುರುವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ವಶಿಷ್ಠ 6-1, 6-0 ರಲ್ಲಿ ವಿಘ್ನೇಶ್ ಸುಬ್ರಮಣ್ಯನ್ ವಿರುದ್ಧ ಸುಲಭ ಗೆಲುವು ಪಡೆದರು. ಬಾಲಕಿಯರ ವಿಭಾಗದ ಫೈನಲ್‌ಲ್ಲಿ ರಷ್ಮಿಕಾ 6-2, 6-0 ರಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಎಸ್. ಸೋಹಾ ವಿರುದ್ಧ ಅಚ್ಚರಿಯ ಜಯ ಸಾಧಿಸಿದರು.

ಬಾಲಕರ 18 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲೂ ಫೈನಲ್ ಪ್ರವೇಶಿಸಿರುವ ವಶಿಷ್ಠ ಪ್ರಶಸ್ತಿ `ಡಬಲ್' ಸಾಧನೆ ಮಾಡುವ ಅವಕಾಶ ಪಡೆದಿದ್ದಾರೆ. ಅವರು ನಾಲ್ಕರಘಟ್ಟದ ಪಂದ್ಯದಲ್ಲಿ 6-0, 6-3 ರಲ್ಲಿ ವರುಣ್ ವೆಂಕಟ್ ವಿರುದ್ಧ ಜಯ ಪಡೆದರು.

ವಶಿಷ್ಠ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಗಣೇಶ್ ಶ್ರೀನಿವಾಸನ್ ಸವಾಲನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಗಣೇಶ್ 6-1, 6-1 ರಲ್ಲಿ ಬಿ. ರಾಹುಲ್ ಅವರನ್ನು ಸೋಲಿಸಿದರು.

ಬಾಲಕಿಯರ 18 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ಎಸ್. ಪ್ರಣೀತಾ ಹಾಗೂ ನೂಪುರ್ ಉಮಾಶಂಕರ್ ಪರಸ್ಪರ ಪೈಪೋಟಿ ನಡೆಸುವರು. ಸೆಮಿಫೈನಲ್ ಪಂದ್ಯಗಳಲ್ಲಿ ಪ್ರಣೀತಾ 6-1, 6-1 ರಲ್ಲಿ ಲಾವಣ್ಯಾ ಸರವಣನ್ ವಿರುದ್ಧವೂ, ನೂಪುರ್ 6-2, 7-6 ರಲ್ಲಿ ಎಸ್. ಸೋಹಾ ಎದುರೂ ಜಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.