ADVERTISEMENT

`ತಿದ್ದುಪಡಿಯ ಪ್ರಸ್ತಾವನೆ ಸಲ್ಲಿಸಿ'

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:53 IST
Last Updated 4 ಜೂನ್ 2013, 19:53 IST

ನವದೆಹಲಿ (ಪಿಟಿಐ): ಎಲ್ಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಸಂಯೋಜಿಸಿ ಸಲ್ಲಿಸಿ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆಗೆ(ಐಒಎ) ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಂಗಳವಾರ ಪತ್ರ ಬರೆದಿದೆ.

ಇದಕ್ಕಾಗಿ ಜೂನ್ 12ರ ವರೆಗೆ ಗಡುವು ನೀಡಿದೆ. ಈ ಮೂಲಕ ಐಒಎ ಮೇಲಿನ ನಿಷೇಧ ಹಿಂಪಡೆಯುವ ಕ್ರಮಗಳಿಗೆ ಶೀಘ್ರವೇ ಚಾಲನೆ ದೊರೆಯುವ ಸಾಧ್ಯತೆಗಳಿವೆ.

  ಮೇ 24ರಂದೂ ಪತ್ರವೊಂದು ಬಂದಿದ್ದು, ಭಾರತದ ಮೇಲಿನ ನಿಷೇಧ ತೆರವು ನಿಟ್ಟಿನಲ್ಲಿ ಐಒಸಿ, ಐಒಎಗೆ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿತ್ತು. ಅದರ ಅನ್ವಯ ಐಒಎ, ಜುಲೈ 15ರ ಒಳಗೆ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಿದೆ. ಸೆಪ್ಟಂಬರ್ 1ರ ವೇಳೆಗೆ ಸಂಸ್ಥೆಗೆ ಹೊಸ ಪದಾಧಿಕಾರಿಗಳನ್ನು ನೇಮಿಸಬೇಕಿದೆ. ಇವೆಲ್ಲವೂ ಐಒಸಿಯ ಕಣ್ಗಾವಲಿನಲ್ಲಿ ನಡೆಯಬೇಕಿದೆ.

ತಿದ್ದುಪಡಿ ಪ್ರಸ್ತಾವನೆಗಳ ಅಧ್ಯಯನದ ಬಳಿಕ ತಮ್ಮ ಅಭಿಪ್ರಾಯವನ್ನು ತಿಳಿಸುವುದಾಗಿಯೂ ಐಒಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.