ADVERTISEMENT

ದಾವಣಗೆರೆ ವಿ.ವಿ. ಶುಭಾರಂಭ

ದಕ್ಷಿಣ ವಲಯ ಅಂತರ ವಿ.ವಿ. ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:54 IST
Last Updated 15 ಡಿಸೆಂಬರ್ 2012, 19:54 IST

ಸುರತ್ಕಲ್: ದಾವಣಗೆರೆ ವಿಶ್ವವಿದ್ಯಾಲಯ ತಂಡ, ಶನಿವಾರ ಮಣಿಪಾಲ ವಿ.ವಿ. ಆಶ್ರಯದಲ್ಲಿ ಆರಂಭವಾದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ  ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ. ತಂಡವನ್ನು 49 ರನ್‌ಗಳಿಂದ ಸೋಲಿಸಿತು.

ಎನ್‌ಐಟಿಕೆ ಮೈದಾನದಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ದಾವಣಗೆರೆ ವಿ.ವಿ. 197 ರನ್ ಹೊಡೆಯಿತು. ಇದಕ್ಕೆ ಉತ್ತರವಾಗಿ  ಕೃಷಿ ವಿ.ವಿ. ತಂಡ 148 ರನ್ನಿಗೆ ಕುಸಿಯಿತು.

ಸಮೀಪದ ಇನ್ನೊಂದು ಮೈದಾನದಲ್ಲಿ ಶ್ರೀಕಾಕುಲಂನ ಡಾ.ಬಿ.ಆರ್.ಅಂಬೇಡ್ಕರ್ ವಿ.ವಿ. 213 ರನ್‌ಗಳ ಭರ್ಜರಿ ಅಂತರದಿಂದ ತಿರುಪತಿಯ ಶ್ರೀವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಂಡವನ್ನು ಬಗ್ಗುಬಡಿಯಿತು. ಅನಂತಪುರದ ಜೆಎನ್‌ಟಿಯು, ರಾಜಮುಂಡ್ರಿಯ ಆದಿ ಕವಿ ನನ್ನಯ್ಯ ವಿ.ವಿ., ಬೆಂಗಳೂರಿನ ಕ್ರೈಸ್ಟ್ ವಿ.ವಿ., ಮಚಲಿಪಟ್ಟಣಂನ ಕೃಷ್ಣಾ ವಿ.ವಿ. ಎದುರಾಳಿ ತಂಡಗಳು ಬರದ ಕಾರಣ ವಾಕ್‌ಓವರ್ ಪಡೆದವು.

ಸ್ಕೋರುಗಳು: ಸುರತ್ಕಲ್‌ನ ಎನ್‌ಐಟಿಕೆ ಮೈದಾನ: ದಾವಣಗೆರೆ ವಿ.ವಿ: 47 ಓವರುಗಳಲ್ಲಿ 197 (ಪ್ರವೀಣ್ 37, ಅಂಕುಶ್ 33, ಸಂದೀಪ್ 30, ರಾಹುಲ್ 25; ದಿಲೀಪ್ 25ಕ್ಕೆ 4, ವಿನಯ್ 27ಕ್ಕೆ 3); ಕೃಷಿ ವಿಜ್ಞಾನ ವಿ.ವಿ, ಬೆಂಗಳೂರು: 42.1 ಓವರುಗಳಲ್ಲಿ 148 (ಅರ್ಜುನ್ 52; ಕರಣ್ 21ಕ್ಕೆ2, ನಿರಂಜನ್ 22ಕ್ಕೆ 3, ಪವನ್ 27ಕ್ಕೆ 2, ಸಂದೀಪ್ 14ಕ್ಕೆ 2).

ಮಣಿಪಾಲ ವಿ.ವಿ. ಮೈದಾನ: ಎಸ್‌ಸಿಎಸ್‌ವಿಎಂ, ಕಾಂಚಿಪುರಂ: 46.4 ಓವರುಗಳಲ್ಲಿ 179 (ರಂಜಿತ್ 64, ಮದನ್ ಕುಮಾರ್ 31); ಪ್ರಮೋದ್ 41ಕ್ಕೆ 6, ಶರತ್ 30ಕ್ಕೆ2); ಎನ್‌ಐಟಿ, ವಾರಂಗಲ್: 17 ಓವರುಗಳಲ್ಲಿ 67 (ಕಾಜಾ ಔಟಾಗದೇ 26; ಕೆ.ಸುರೇಂದರ್ 30ಕ್ಕೆ4, ವಿನೋದ್ 11ಕ್ಕೆ4).

ಎನ್‌ಐಟಿಕೆ ಮೈದಾನ1: ಡಾ.ಬಿ.ಆರ್.ಅಂಬೇಡ್ಕರ್ ವಿ.ವಿ., ಶ್ರೀಕಾಕುಳಂ: 50 ಓವರುಗಳಲ್ಲಿ 8 ವಿಕೆಟ್‌ಕ್ಕೆ 323 (ಶೇಖರ್ 69, ಎಸ್.ಎಚ್.ಶ್ರೀನಿವಾಸ್ 66, ಅಬ್ದುಲ್ ಎಸ್.ಕೆ. 89); ಶ್ರೀವೆಂಕಟೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ತಿರುಪತಿ: 32.2 ಓವರುಗಳಲ್ಲಿ 110 (ಶೇಖರ್ 44; ರಾಜಶೇಖರ್ 23ಕ್ಕೆ6).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.