ADVERTISEMENT

ದ್ರಾವಿಡ್, ಪ್ರವೀಣ್ ಬಗ್ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2011, 18:55 IST
Last Updated 24 ಜೂನ್ 2011, 18:55 IST
ದ್ರಾವಿಡ್, ಪ್ರವೀಣ್ ಬಗ್ಗೆ ಮೆಚ್ಚುಗೆ
ದ್ರಾವಿಡ್, ಪ್ರವೀಣ್ ಬಗ್ಗೆ ಮೆಚ್ಚುಗೆ   

ಕಿಂಗ್‌ಸ್ಟನ್, ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರಾಹುಲ್ ದ್ರಾವಿಡ್ ಹಾಗೂ ಪ್ರವೀಣ್ ಕುಮಾರ್ ಅವರ ಬಗ್ಗೆ ನಾಯಕ ಮಹೇಂದ್ರ ಸಿಂಗ್ ದೋನಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

`ಪ್ರವೀಣ್ ಒಬ್ಬ ಬುದ್ಧಿವಂತ ಬೌಲರ್. ಪರಿಸ್ಥಿತಿಗೆ ತಕ್ಕಂತೆ ಚೆಂಡೆಸೆಯುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಅವರು ಪಂದ್ಯದಲ್ಲಿ ಆರು ವಿಕೆಟ್ ಪಡೆಯಲು ಇದು ಪ್ರಮುಖ ಕಾರಣ~ ಎಂದು ಪಂದ್ಯದ ಬಳಿಕ `ಮಹಿ~ ಪ್ರತಿಕ್ರಿಯಿಸಿದರು. ಸಬೀನಾ ಪಾರ್ಕ್‌ನಲ್ಲಿ ಗುರುವಾರ ಕೊನೆಗೊಂಡ ಪಂದ್ಯದಲ್ಲಿ ಭಾರತ 63 ರನ್‌ಗಳ ಜಯ ಸಾಧಿಸಿತ್ತು.

ಈ ಗೆಲುವಿನ ಮೂಲಕ ಪ್ರವಾಸಿ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-0 ರಲ್ಲಿ ಮುನ್ನಡೆ ಪಡೆದಿದೆ. `ಪಂದ್ಯಶ್ರೇಷ್ಠ~ ದ್ರಾವಿಡ್ ಅವರ ಸಾಧನೆಯನ್ನೂ ದೋನಿ ಕೊಂಡಾಡಿದರು. `ದ್ರಾವಿಡ್ ಅಸಾಮಾನ್ಯ ಬ್ಯಾಟ್ಸ್‌ಮನ್. 250ಕ್ಕೂ ಅಧಿಕ ಎಸೆತಗಳನ್ನು ಎದುರಿಸಿ ನಿಂತದ್ದು ಅವರ ತಾಳ್ಮೆ ಏನೆಂಬುದನ್ನು ತೋರಿಸಿದೆ~ ಎಂದು ತಿಳಿಸಿದರು.

ಹಾರ್ಪರ್ ಬಗ್ಗೆ ಟೀಕೆ: ಮೊದಲ ಟೆಸ್ಟ್‌ನಲ್ಲಿ ಕೆಲವೊಂದು ಕಳಪೆ ತೀರ್ಪುಗಳನ್ನು ನೀಡಿದ ಆಸ್ಟ್ರೇಲಿಯದ ಅಂಪೈರ್ ಡೆರಿಲ್ ಹಾರ್ಪರ್ ಭಾರತದ ಆಟಗಾರರ ಟೀಕೆಗೆ ಗುರಿಯಾಗಿದ್ದಾರೆ. ಅವರು ಮೂರನೇ ಟೆಸ್ಟ್‌ನಲ್ಲಿ ಕಾರ್ಯನಿರ್ವಹಿವುಸುದು ಬೇಡ ಎಂದು ಭಾರತ ತಂಡದ ಹಿರಿಯ ಆಟಗಾರರೊಬ್ಬರು ನುಡಿದಿದ್ದಾರೆ.

ದೋನಿ ಕೂಡಾ ಅಂಪೈರಿಂಗ್ ಬಗ್ಗೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು. `ಅಂಪೈರ್ ಸರಿಯಾದ ನಿರ್ಣಯಗಳನ್ನು ಕೈಗೊಂಡಿದ್ದಲ್ಲಿ ಈ ಪಂದ್ಯ ಬಹಳ ಬೇಗನೇ ಕೊನೆಗೊಳ್ಳುತ್ತಿತ್ತು~ ಎಂದು ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 61.2 ಓವರ್‌ಗಳಲ್ಲಿ 246
ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್ 67.5 ಓವರ್‌ಗಳಲ್ಲಿ 173
ಭಾರತ ಎರಡನೇ ಇನಿಂಗ್ಸ್ 94.5 ಓವರ್‌ಗಳಲ್ಲಿ 252
ವಿಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 68.2 ಓವರ್‌ಗಳಲ್ಲಿ 262
ಅಡ್ರಿಯಾನ್ ಭರತ್ ಸಿ ರೈನಾ ಬಿ ಪ್ರವೀಣ್ ಕುಮಾರ್  38
ಲೆಂಡ್ಲ್ ಸಿಮಾನ್ಸ್ ಬಿ ಇಶಾಂತ್ ಶರ್ಮ  27
ರಾಮನರೇಶ ಸರವಣ ಸಿ ಕೊಹ್ಲಿ ಬಿ ಇಶಾಂತ್ ಶರ್ಮ  00
ಡೆರನ್ ಬ್ರಾವೊ ಬಿ ಪ್ರವೀಣ್ ಕುಮಾರ್  41
ಚಂದ್ರಪಾಲ್ ಸಿ ರೈನಾ ಬಿ ಪ್ರವೀಣ್ ಕುಮಾರ್  30
ಬ್ರೆಂಡನ್ ನ್ಯಾಶ್ ಎಲ್‌ಬಿಡಬ್ಲ್ಯು ಬಿ ಅಮಿತ್ ಮಿಶ್ರಾ  09
ಕಾರ್ಲ್‌ಟನ್ ಬಾಗ್ ಸಿ ಕೊಹ್ಲಿ ಬಿ ಹರಭಜನ್ ಸಿಂಗ್  00
ಡೆರೆನ್ ಸಮಿ ಸಿ ಲಕ್ಷ್ಮಣ್ ಬಿ ಅಮಿತ್ ಮಿಶ್ರಾ  25
ರವಿ ರಾಂಪಾಲ್ ಸಿ ದೋನಿ ಬಿ ಇಶಾಂತ್ ಶರ್ಮ  34
ಫಿಡೆಲ್ ಎಡ್ವರ್ಡ್ಸ್ ಔಟಾಗದೆ  15
ದೇವೆಂದ್ರ ಬಿಶೂ ಬಿ ಸುರೇಶ್ ರೈನಾ  26
ಇತರೆ: (ಬೈ-1, ಲೆಗ್ ಬೈ-13, ವೈಡ್-2, ನೋಬಾಲ್-1)   17
ವಿಕೆಟ್ ಪತನ: 1-62 (ಭರತ್; 10.6), 2-63 (ಸರವಣ; 11.3), 3-80(ಸಿಮಾನ್ಸ್; 15.1), 4-148 (ಬ್ರಾವೊ 38.3), 5-149 (ಚಂದ್ರಪಾಲ್; 40.5), 6-150 (ಬಗ್; 43.1), 7-181 (ಸಮಿ; 48.1); 8-188 (ನ್ಯಾಶ್; 50.6); 9-223 (ರಾಂಪಾಲ್; 56.5); 10-262 (ಬಿಶೂ; 68.2).
ಬೌಲಿಂಗ್ ವಿವರ: ಪ್ರವೀಣ್ ಕುಮಾರ್ 16-3-42-3, ಇಶಾಂತ್ ಶರ್ಮ 17-3-81-3, ಅಮಿತ್ ಮಿಶ್ರಾ 13-1-62-2, ಹರಭಜನ್ ಸಿಂಗ್ 16-3-54-1, ಸುರೇಶ್ ರೈನಾ 6.2-1-9-1.
ಫಲಿತಾಂಶ: ಭಾರತಕ್ಕೆ 63 ರನ್‌ಗಳ ಜಯ ಹಾಗೂ ಸರಣಿಯಲ್ಲಿ 1-0 ಮುನ್ನಡೆ. 
ಪಂದ್ಯ ಶ್ರೇಷ್ಠ: ರಾಹುಲ್ ದ್ರಾವಿಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.