ADVERTISEMENT

‘ನನ್ನ ಮಗ ಭಾರತ ಹಾಕಿ ತಂಡ ಪ್ರತಿನಿಧಿಸಲಿ’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 20:42 IST
Last Updated 9 ಏಪ್ರಿಲ್ 2018, 20:42 IST
ಮಗಳು ಸುಹಾನಾರೊಂದಿಗೆ ಪಂದ್ಯ ವೀಕ್ಷಿಸಿದ ಶಾರುಖ್‌ ಪಿಟಿಐ ಚಿತ್ರ
ಮಗಳು ಸುಹಾನಾರೊಂದಿಗೆ ಪಂದ್ಯ ವೀಕ್ಷಿಸಿದ ಶಾರುಖ್‌ ಪಿಟಿಐ ಚಿತ್ರ   

ಕೋಲ್ಕತ್ತ: ‘ನನ್ನ ಕೊನೆಯ ಮಗ ಅಬ್ರಾಮ್‌ (5) ಹಾಕಿ ಆಟಗಾರನಾಗಬೇಕು. ಜಾಗತಿಕ ಮಟ್ಟದ ಹಾಕಿಯಲ್ಲಿ ಆತ ಭಾರತವನ್ನು ಪ್ರತಿನಿಧಿಸಬೇಕು’ ಎಂದು ಬಾಲಿವುಡ್‌ ನಟ ಶಾರುಖ್‌ ಖಾನ್‌ ಹೇಳಿದ್ದಾರೆ.

ಆರ್‌ಸಿಬಿ ಮತ್ತು ತಮ್ಮ ತಂಡ ಕೆಕೆಆರ್‌ ನಡುವಣ ಪಂದ್ಯವನ್ನು ಅವರು ಮಗ ಅಬ್ರಾಮ್‌ ಹಾಗೂ ಮಗಳು ಸುಹಾನಾ ಜೊತೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಬ್ರಾಮ್‌ ಇನ್ನೂ ಕ್ರಿಕೆಟ್‌ ಆಡಲು ಶುರು ಮಾಡಿಲ್ಲ. ಸದ್ಯಕ್ಕೆ, ಆತ ಫುಟ್‌ಬಾಲ್‌ ಆಡುತ್ತಿದ್ದಾನೆ. ಭಾರತದ ಪರವಾಗಿ ಆತ ಹಾಕಿ ಆಡಬೇಕು ಎಂಬುದು ನನ್ನ ಆಕಾಂಕ್ಷೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

2007ರಲ್ಲಿ ಬಿಡುಗಡೆಯಾಗಿದ್ದ ‘ಚಕ್‌ ದೇ ಇಂಡಿಯಾ’ ಹಿಂದಿ ಚಲನಚಿತ್ರದಲ್ಲಿ ಶಾರುಖ್‌ ಅವರು ಹಾಕಿ ತಂಡದ ಕೋಚ್‌ ಆಗಿ ಅಭಿನಯಿಸಿದ್ದರು. ವಿಶ್ವಕಪ್‌ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಕೋಚ್‌ ಆಗಿದ್ದ ಕಬೀರ್‌ ಖಾನ್‌ ಅವರ ಪಾತ್ರದಲ್ಲಿ ಮಿಂಚಿದ್ದ ಶಾರುಖ್‌, ಭಾರತದ ರಾಷ್ಟ್ರೀಯ ಕ್ರೀಡೆಗೆ ಸಂಬಂಧಿಸಿದ ಈ ಚಿತ್ರವು ತಮ್ಮ ವೃತ್ತಿಜೀವನದ ವಿಶೇಷ ಎಂದು ಹಲವು ಬಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.