ADVERTISEMENT

ನಾಸ್ಕರ್ ಚಾಲಕ ಜೇಸನ್ ಲೆಫ್ಲೆರ್ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ಬ್ರಿಜ್‌ಪೋರ್ಟ್, ನ್ಯೂಜೆರ್ಸಿ (ಎಪಿ): ಬ್ರಿಜ್‌ಪೊರ್ಟ್‌ನಲ್ಲಿ ಬುಧವಾರ ರಾತ್ರಿ ನಡೆದ ಡರ್ಟ್ ಕಾರ್ ರೇಸ್‌ನಲ್ಲಿ ಅಪಘಾತಕ್ಕೀಡಾಗಿದ್ದ ನಾಸ್ಕರ್(ಎನ್‌ಎಎಸ್‌ಸಿಆರ್) ಚಾಲಕ ಜೇಸನ್ ಲೆಫ್ಲೆರ್ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ನ್ಯೂಜೆರ್ಸಿ ರಾಜ್ಯ ಪೊಲೀಸರು ತಿಳಿಸಿದ್ದಾರೆ.

37 ವರ್ಷ ವಯಸ್ಸಿನ ಲೆಫ್ಲೆರ್ ನಿಧನಕ್ಕೆ `ನಾಸ್ಕರ್' ರೇಸ್ ತಂಡ ಸಂತಾಪ ಸೂಚಿಸಿದೆ. ಅಷ್ಟು ಮಾತ್ರವಲ್ಲದೇ, ಅವರ ಕುಟುಂಬದ ಬಗ್ಗೆ ಅನುಕಂಪ ವ್ಯಕ್ತಪಡಿಸಿದೆ. `ಒಂದು ದಶಕಕ್ಕೂ ಹೆಚ್ಚಿನ ಕಾಲ ಜೇಸನ್ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲುತ್ತಿದ್ದರು. ಅವರ ಅನುಪಸ್ಥಿತಿ ಕಾಡಲಿದೆ' ಎಂದು ನಾಸ್ಕರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.