ADVERTISEMENT

ಪರಿಮಾರ್ಜನ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಕೂಪನ್‌ಹೇಗನ್, ಡೆನ್ಮಾರ್ಕ್ (ಪಿಟಿಐ): ಭಾರತದ ಪರಿಮಾರ್ಜನ್ ನೇಗಿ ಇಲ್ಲಿ ನಡೆದ ಪಾಲಿಟಿಕೆನ್ ಕಪ್-2013 ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಆಡಿದ 10 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿ ನವದೆಹಲಿ ಮೂಲದ ನೇಗಿ ಈ ಸಾಧನೆ ಮಾಡಿದ್ದಾರೆ. ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡವು. ಭಾರತದ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎನಿಸಿರುವ ಅವರು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ಆಟಗಾರರನ್ನು ಮಣಿಸಿದ್ದಾರೆ. ಈ ಗೆಲುವಿನಿಂದಾಗಿ ನೇಗಿ ಅವರ ಇಎಲ್‌ಒ ಪಾಯಿಂಟ್ 2660ರ ಗಡಿ ದಾಟಿದೆ. ಅವರು 2009ರಲ್ಲೂ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.