ADVERTISEMENT

ಪೀಟರ್‌ಸನ್ ಶತಕ

ಆ್ಯಷಸ್ ಕ್ರಿಕೆಟ್: ಇಂಗ್ಲೆಂಡ್ ತಂಡದ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST
ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಶನಿವಾರ ಶತಕ ಗಳಿಸಿದ ಇಂಗ್ಲೆಂಡ್ ತಂಡದ ಕೆವಿನ್ ಪೀಟರ್‌ಸನ್ ಬ್ಯಾಟಿಂಗ್ ವೈಖರಿ 	- ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ಶನಿವಾರ ಶತಕ ಗಳಿಸಿದ ಇಂಗ್ಲೆಂಡ್ ತಂಡದ ಕೆವಿನ್ ಪೀಟರ್‌ಸನ್ ಬ್ಯಾಟಿಂಗ್ ವೈಖರಿ - ಎಎಫ್‌ಪಿ ಚಿತ್ರ   

ಮ್ಯಾಂಚೆಸ್ಟರ್ (ಎಎಫ್‌ಪಿ): ಕೆವಿನ್ ಪೀಟರ್‌ಸನ್ ಗಳಿಸಿದ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಕ್ರಿಕೆಟ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಮರುಹೋರಾಟ ನಡೆಸುವಲ್ಲಿ ಯಶಸ್ವಿಯಾಗಿದೆ.

ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 106 ಓವರ್‌ಗಳಲ್ಲಿ 5 ವಿಕೆಟ್‌ಗೆ 277 ರನ್ ಗಳಿಸಿತ್ತು. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪೀಟರ್‌ಸನ್ (112) ಮತ್ತು ಜಾನಿ ಬೈಸ್ಟೋವ್ (22) ಕ್ರೀಸ್‌ನಲ್ಲಿದ್ದರು.

ಆತಿಥೇಯ ತಂಡ ಇನ್ನೂ 250 ರನ್‌ಗಳಿಂದ ಹಿನ್ನಡೆಯಲ್ಲಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 527 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಇಂಗ್ಲೆಂಡ್ ಎರಡು ವಿಕೆಟ್‌ಗೆ 52 ರನ್‌ಗಳಿಂದ ಮೂರನೇ ದಿನದಾಟ ಆರಂಭಿಸಿತ್ತು. ಜೊನಾಥನ್ ಟ್ರಾಟ್ (5) ಅವರನ್ನು ತಂಡ ಬೇಗನೇ ಕಳೆದು ಕೊಂಡಿತು. ನಾಯಕ ಅಲಸ್ಟೇರ್ ಕುಕ್ ಮತ್ತು ಪೀಟರ್‌ಸನ್ ನಾಲ್ಕನೇ ವಿಕೆಟ್‌ಗೆ 46 ರನ್ ಸೇರಿಸಿದರು. ಆದರೆ 62 ರನ್ ಗಳಿಸಿದ ಕುಕ್ ಔಟಾದಾಗ ಇಂಗ್ಲೆಂಡ್ ಮತ್ತೆ ಒತ್ತಡಕ್ಕೆ ಒಳಗಾಯಿತು.

ಈ ಹಂತದಲ್ಲಿ ಜೊತೆಯಾದ ಪೀಟರ್‌ಸನ್ ಮತ್ತು ಇಯಾನ್ ಬೆಲ್ (60) ತಂಡಕ್ಕೆ ಆಸರೆಯಾದರು. ಇವರು ಐದನೇ ವಿಕೆಟ್‌ಗೆ 110 ರನ್‌ಗಳನ್ನು ಕಲೆಹಾಕಿ ದರು. ತಾಳ್ಮೆಯ ಆಟವಾಡಿದ ಪೀಟರ್‌ಸನ್ ಎದುರಾಳಿ ತಂಡದ ಎಲ್ಲ ಬೌಲರ್‌ಗಳು ಸಮರ್ಥವಾಗಿ ಎದುರಿಸಿ ನಿಂತರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ:
ಮೊದಲ ಇನಿಂಗ್ಸ್ 146 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 527 ಡಿಕ್ಲೇರ್ಡ್.
ಇಂಗ್ಲೆಂಡ್: ಮೊದಲ ಇನಿಂಗ್ಸ್ 106 ಓವರ್‌ಗಳಲ್ಲಿ 5 ವಿಕೆಟ್‌ಗೆ 277 (ಅಲಸ್ಟೇರ್ ಕುಕ್ 62, ಕೆವಿನ್ ಪೀಟರ್‌ಸನ್ ಬ್ಯಾಟಿಂಗ್ 112, ಇಯಾನ್ ಬೆಲ್ 60, ಜಾನಿ ಬೈಸ್ಟೋವ್ ಬ್ಯಾಟಿಂಗ್ 22, ರ‍್ಯಾನ್ ಹ್ಯಾರಿಸ್ 48ಕ್ಕೆ 2, ಪೀಟರ್ ಸಿಡ್ಲ್ 48ಕ್ಕೆ 2, ಮಿಷೆಲ್ ಸ್ಟಾರ್ಕ್ 66ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.