ADVERTISEMENT

ಪ್ರಸಾರ ಹಕ್ಕು ಹರಾಜು: ಆರಂಭಿಕ ಬೆಲೆ 31 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಮುಂಬೈ (ಪಿಟಿಐ): ಭಾರತ ತಂಡದ ನೀರಸ ಪ್ರದರ್ಶನದಿಂದ ಟೆಲಿವಿಷನ್‌ನಲ್ಲಿ ಪಂದ್ಯಗಳನ್ನು ನೋಡುವ ಆಸಕ್ತರ ಸಂಖ್ಯೆ ಕಡಿಮೆ ಆಗಿದೆ ಎನ್ನುವ ಭಾವನೆ ಮೂಡಿದ್ದು ಸಹಜ. ಆದರೆ ಬಿಸಿಸಿಐ ಹಾಗೆ ಭಾವಿಸುವುದಿಲ್ಲ. ಆದ್ದರಿಂದಲೇ ಪಂದ್ಯ ಪ್ರಸಾರ ಹಕ್ಕು ಹರಾಜಿನ ಆರಂಭಿಕ ಬೆಲೆಯನ್ನು ಹೆಚ್ಚಿಸಿದೆ.

ಬುಧವಾರ ಇಲ್ಲಿ ನಡೆದ ಬಿಸಿಸಿಐ ಮಾರುಕಟ್ಟೆ ಸಮಿತಿ ಸಭೆಯಲ್ಲಿ ಪ್ರತಿ ಪಂದ್ಯಕ್ಕೆ ಆರಂಭಿಕ ಬೆಲೆ ನಿಗದಿ ಮಾಡಲಾಯಿತು. `ಎ~ ವರ್ಗಕ್ಕೆ ಸೇರಿಸಲಾದ ಒದು ಅಂತರರಾಷ್ಟ್ರೀಯ ಪಂದ್ಯಕ್ಕೆ 31.25 ಕೋಟಿ ಹಾಗೂ ಹೆಚ್ಚುವರಿ 1 ಕೋಟಿ ರೂ. ಎಂದು ನಿರ್ಧರಿಸಲಾಯಿತು. ಅದೇ `ಬಿ~ ವರ್ಗದ ಪಂದ್ಯಕ್ಕೆ ರೂ. 33 ಕೋಟಿ (ಹೆಚ್ಚುವರಿ 1 ಕೋಟಿ) ಆರಂಭಿಕ ಬೆಲೆ ಎಂದು ತೀರ್ಮಾನಿಸಲಾಯಿತು.

ಮಾರ್ಚ್ 10ರಂದು ಪತ್ರಿಕಾ ಜಾಹೀರಾತುಗಳ ಮೂಲಕ ಹರಾಜಿಗೆ ಆಹ್ವಾನ ನೀಡಲಾಗುತ್ತದೆ. ಪ್ರಸಾರ ಹಕ್ಕು ಪಡೆಯಲು ಬಯಸುವವರು ಮುಚ್ಚಿದ ಲಕೋಟೆಯಲ್ಲಿ ತಮ್ಮ ಬಿಡ್ ಸಲ್ಲಿಸಬೇಕು. ಅಂತಿಮವಾಗಿ ಲಕೋಟೆಗಳನ್ನು ಏಪ್ರಿಲ್ 2ರಂದು ಚೆನ್ನೈನಲ್ಲಿ ನಡೆಯುವ ಸಭೆಯಲ್ಲಿ ತೆರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.