ಮುಂಬೈ: ಪ್ರೊ ಕಬಡ್ಡಿ ಐದನೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ಜೈಂಟ್ಸ್ ತಂಡ 42–17 ಪಾಯಿಂಟ್ಸ್ಗಳಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯಭೇರಿ ದಾಖಲಿಸಿದೆ.
ಸುಕೇಶ್ ಹೆಗಡೆ ಸಾರಥ್ಯದ ಫಾರ್ಚೂನ್ಜೈಂಟ್ಸ್ ಆರಂಭದಿಂದಲೇ ಮಿಂಚಿತು. ಈ ತಂಡಕ್ಕೆ ಸಚಿನ್ ಒಂಬತ್ತು ಪಾಯಿಂಟ್ಸ್ ತಂದುಕೊಟ್ಟರು. ಮಹೇಂದ್ರ ರಜಪೂತ್ ಎಂಟು ಪಾಯಿಂಟ್ಸ್ ಕಲೆಹಾಕಿದರು. ರಾಕೇಶ್ ನರ್ವಾಲ್, ಸುನಿಲ್ ಕುಮಾರ್ ತಲಾ ನಾಲ್ಕು ಪಾಯಿಂಟ್ಸ್ ತಂದರು.
ದೀಪಕ್ ನರ್ವಾಲ್ ಐದು ಪಾಯಿಂಟ್ಸ್ ಗಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.