ADVERTISEMENT

ಫುಟ್‌ಬಾಲ್‌: ಎಚ್‌ಎಎಲ್‌ ತಂಡಕ್ಕೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST
ಎಚ್‌ಎಎಲ್‌ ತಂಡದ ಗೋಪಿ ಅವರು ಸೌಥ್‌ ಯುನೈಟೆಡ್‌ ತಂಡದ ಟೋನಿ ಜೊತೆ  ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ 	–ಪ್ರಜಾವಾಣಿ ಚಿತ್ರ
ಎಚ್‌ಎಎಲ್‌ ತಂಡದ ಗೋಪಿ ಅವರು ಸೌಥ್‌ ಯುನೈಟೆಡ್‌ ತಂಡದ ಟೋನಿ ಜೊತೆ ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎಚ್‌ಎಎಲ್‌ ತಂಡದವರು  ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಕ್ಲಬ್‌ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್‌  ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ರೋಚಜ ಜಯ ದಾಖಲಿಸಿದ್ದಾರೆ. ಅಶೋಕ ನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್‌ 2–1 ಗೋಲುಗಳಿಂದ ಸೌಥ್‌ ಯುನೈಟೆಡ್‌ ತಂಡವನ್ನು  ಮಣಿಸಿತು.

ಎಚ್‌್ಎಎಲ್‌ ತಂಡದ ಗೋಪಿ ಪಂದ್ಯದ 14ನೇ ನಿಮಿಷದಲ್ಲಿ ಗೋಲು ತಂದಿತ್ತು ತಂಡಕ್ಕೆ ಮುನ್ನಡೆ ಒದಗಿಸಿದರು. 68 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಕಾರ್ತಿಕೇಯನ್‌ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಎಚ್‌್ಎಎಲ್‌ ತಂಡದ ಆಟಗಾರರು ತೋರಿದ ರಕ್ಷಣಾತ್ಮಕ ಆಟದ ನಡುವೆಯೂ 88ನೇ ನಿಮಿಷದಲ್ಲಿ ಸೌಥ್‌ ಯುನೈಟೆಡ್‌ನ ಸೆಂಥಿಲ್‌ ಗೋಲು ಗಳಿಸಿದರಾದರೂ  ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

ಗೆದ್ದ ಬಿಯುಎಫ್‌ಸಿ : ಟೂರ್ನಿಯ  ‘ಎ’ ಡಿವಿಷನ್‌ ಪಂದ್ಯದಲ್ಲಿಬೆಂಗಳೂರು ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ (ಬಿಯುಎಫ್‌ಸಿ)  2–0 ಗೋಲುಗಳಿಂದ  ಬೆಂಗಳೂರು ಕಿಕ್ಕರ್ಸ್‌  ತಂಡವನ್ನು ಸೋಲಿಸಿತು.

ಬಿಯುಎಫ್‌ಸಿ ಪರ  ನರೇಶ್‌ (23 ನೇ ನಿಮಿಷ) ಮತ್ತು ರಾಕೇಶ್‌ (35ನೇ ನಿ) ತಲಾ ಒಂದು ಗೋಲು ಬಾರಿಸಿ ಗೆಲುವಿನ ರೂವಾರಿ ಎನಿಸಿದರು.
ಪ್ರಭಾವಿ ಪ್ರದರ್ಶನ ನೀಡಿದ ಬಿಯುಎಫ್‌ಸಿ ಆಟಗಾರರು ಕಿಕ್ಕರ್ಸ್‌ ತಂಡ  ಗೋಲಿನ ಖಾತೆ ತೆರೆಯದಂತೆ ನೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.