ಸಿಲಿಗುರಿ (ಐಎಎನ್‌ಎಸ್): ಮಿಜೋರಾಂ ತಂಡದವರು ಇಲ್ಲಿ ನಡೆಯುತ್ತಿರುವ 68ನೇ ರಾಷ್ಟ್ರೀಯ ಸಂತೋಷ್ ಟ್ರೋಫಿ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ.
ಕಾಂಚನಜುಂಗಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಮಿಜೋರಾಂ 3–1 ಗೋಲುಗಳಿಂದ ತಮಿಳುನಾಡು ತಂಡವನ್ನು ಮಣಿಸಿತು.
ತಮಿಳುನಾಡು ಪರ ಎ.ರಯೇಗನ್ ಪಂದ್ಯದ ಮೊದಲಾರ್ಧದ 45ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.
ನಂತರದ ಅವಧಿಯಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಮಿಜೋರಾಂನ ಡೇವಿಡ್ ಲಾಲ್ರಿನ್‌ಮೌನಾ (62ನೇ ನಿಮಿಷ), ಜಿಕೊ ಜೋರೆಮ್‌ಸಂಗಾ (94) ಹಾಗೂ ಎಫ್.ಲಾಲ್ರಿನ್‌ಪುಯಿಯಾ (119) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.