ADVERTISEMENT

ಫುಟ್‌ಬಾಲ್‌: ಬೆಂಗಳೂರು ಗನ್ನರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 18:25 IST
Last Updated 3 ಮಾರ್ಚ್ 2014, 18:25 IST

ಬೆಂಗಳೂರು: ಬೆಂಗಳೂರು ಗನ್ನರ್ಸ್‌ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದಲ್ಲಿ ನಡೆಯುತ್ತಿರುವ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಗೆಲುವು ಪಡೆದಿದ್ದಾರೆ.

ಬಸವನಗುಡಿಯ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗನ್ನರ್ಸ್‌ 2–1 ಗೋಲುಗಳಿಂದ ಯಂಗ್‌ ಡೈನಾಮೊಸ್‌  ತಂಡವನ್ನು ಸೋಲಿಸಿತು.

ವಿಜಯೀ ತಂಡದ ಪ್ರದೀಪ್‌ (23ನೇ ನಿಮಿಷ) ಹಾಗೂ ವಿಜಯ್‌ (32) ತಲಾ ಒಂದು ಗೋಲು ಗಳಿಸಿದರೆ, ಡೈನಾಮೊಸ್‌ ಪರ ಸುಜಿ ಪಂದ್ಯದ 49ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಬೆಂಗಳೂರು ರೆಡ್ಸ್‌ ಹಾಗೂ ಯಂಗ್‌  ಮುಸ್ಲಿಮ್ಸ್‌ ನಡುವೆ ನಡೆಯಬೇಕಿದ್ದ ದಿನದ ಮತ್ತೊಂದು ಪಂದ್ಯದಲ್ಲಿ ಮುಸ್ಲಿಮ್ಸ್‌ ತಂಡ ಸಮಯಕ್ಕೆ ಸರಿಯಾಗಿ ಹಾಜರಾಗದ ಕಾರಣ ರೆಡ್ಸ್‌ ತಂಡ ವಾಕ್‌ ಓವರ್‌ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.