ADVERTISEMENT

ಬಾಂಗ್ಲಾದಲ್ಲೇ ಏಷ್ಯಾಕಪ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಕೊಲಂಬೊ (ಎಎಫ್‌ಪಿ/ಪಿಟಿಐ): ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್‌ ಟೂರ್ನಿಯು ನಿಗದಿಯಂತೆ ಬಾಂಗ್ಲಾದೇಶದಲ್ಲಿಯೇ ನಡೆಯ ಲಿದ್ದು, ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.

ಶನಿವಾರ ಇಲ್ಲಿ ನಡೆದ ಏಷ್ಯಾ ಕ್ರಿಕೆಟ್ ಸಮಿತಿಯ (ಎಸಿಸಿ) ಕಾರ್ಯ ಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆ ತೀವ್ರ ಸ್ವರೂಪ  ಪಡೆದಿದ್ದು, ಭದ್ರತೆಯ ದೃಷ್ಟಿಯಿಂದ ಟೂರ್ನಿ ಯನ್ನು ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಸಭೆಯಲ್ಲಿ ಕೆಲವರು ಅಭಿ ಪ್ರಾಯ ಪಟ್ಟರು.  ಹೀಗಿದ್ದರೂ   ಎಸಿಸಿ ತನ್ನ ನಿಲುವಿನಲ್ಲಿ ಯಾವುದೇ ಬದ ಲಾವಣೆ ಮಾಡದಿರಲು ನಿರ್ಧರಿಸಿದೆ.

ಈ ಮೊದಲು ನಿಗದಿ ಪಡಿಸಿದಂತೆ ಫೆಬ್ರುವರಿ 24 ರಿಂದ ಮಾರ್ಚ್‌ 8 ರವರೆಗೆ ಬಾಂಗ್ಲಾದಲ್ಲಿಯೇ ಟೂರ್ನಿ ನಡೆಯಲಿದೆ. ಸಭೆಯಲ್ಲಿ ಬಾಂಗ್ಲಾ ಕ್ರಿಕೆಟ್ ಸಂಸ್ಥೆ  ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸುವ ಭರವಸೆ ನೀಡಿದ್ದು, ಯಾರೂ ಈ ಕುರಿತು ಪ್ರಶ್ನಿಸಲಿಲ್ಲ. ಹೀಗಾಗಿ ಪೂರ್ವ ನಿಗದಿಯಂತೆ ಎಲ್ಲಾ 11 ಪಂದ್ಯಗಳು ಢಾಕಾದಲ್ಲೇ ನಡೆಯಲಿದೆ  ಎಂದು ಎಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ರಫುಲ್ ಹಕ್ ತಿಳಿಸಿದ್ದಾರೆ.

ಏಷ್ಯಾಖಂಡದ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ಜೊತೆಗೆ ಆಫ್ಘಾನಿ ಸ್ತಾನವೂ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.