ADVERTISEMENT

ಬಿಎಂಡಬ್ಲ್ಯು ರ‍್ಯಾಲಿ: ಟೀಂ ಇಂಡಿಯಾ ಸ್ಪರ್ಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:51 IST
Last Updated 24 ಮೇ 2018, 19:51 IST

ಬೆಂಗಳೂರು: ಬಿಎಂಡಬ್ಲ್ಯು ಮೋಟರ್‌ರ‍್ಯಾಡ್‌ ಇಂಟರ್‌ನ್ಯಾಷನಲ್‌ ಜಿಎಸ್‌ ಟ್ರೋಫಿ ಸೆಂಟ್ರಲ್‌ ಏಷ್ಯಾ–2018 ರ‍್ಯಾಲಿಯಲ್ಲಿ ಮೊದಲ ಬಾರಿಗೆ ‘ಟೀಂ ಇಂಡಿಯಾ’ ಭಾಗವಹಿಸಲಿದೆ.

ಈ ರ‍್ಯಾಲಿಯು ಮಂಗೋಲಿಯಾದಲ್ಲಿ ಜೂನ್‌ 3ರಿಂದ ಜೂನ್‌ 10ರವರೆಗೆ ನಡೆಯಲಿದೆ.

ಸತಾರದ ಸಂಕೇತ್‌ ಶಾನ್‌ಭಾಗ್‌,ಕೊಯಮತ್ತೂರಿನ ಸುಪ್ರೇಜ್‌ ವೆಂಕಟ್‌ ಮತ್ತು ಮುಂಬೈನ ವಿನ್ಸೆಂಟ್‌ ಲೀ ಅವರು ‘ಟೀಂ ಇಂಡಿಯಾ’ ತಂಡದಲ್ಲಿದ್ದಾರೆ.

ADVERTISEMENT

ಅಡ್ವೆಂಚರ್‌ ರೈಡಿಂಗ್‌, ಸ್ಪೆಷಲ್‌ ಟೆಸ್ಟ್ಸ್‌ ಮತ್ತು ಟೀಮ್‌ವರ್ಕ್‌ ಚಾಲೆಂಜಸ್‌ ವಿಭಾಗಗಳಲ್ಲಿ ನಡೆಯುವ ರ‍್ಯಾಲಿಯಲ್ಲಿ ಈ ಬಾರಿ ಒಟ್ಟು 18 ತಂಡಗಳು ಪಾಲ್ಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.