ADVERTISEMENT

ಬಿಎಫ್‌ಸಿಗೆ ಚೆನ್ನೈಯಿನ್ ಎದುರಾಳಿ

ಪಿಟಿಐ
Published 13 ಮಾರ್ಚ್ 2018, 19:17 IST
Last Updated 13 ಮಾರ್ಚ್ 2018, 19:17 IST
ಗೋಲು ಗಳಿಸಿದ ನಂತರ ಜೆಜೆ ಲಾಲ್‌ಪೆಖ್ಲುವಾ ಸಂಭ್ರಮಿಸಿದ ಪರಿ
ಗೋಲು ಗಳಿಸಿದ ನಂತರ ಜೆಜೆ ಲಾಲ್‌ಪೆಖ್ಲುವಾ ಸಂಭ್ರಮಿಸಿದ ಪರಿ   

ಚೆನ್ನೈ : ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫೈನಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡವನ್ನು ಚೆನ್ನೈಯಿನ್ ಎಫ್‌ಸಿ ಎದುರಿಸಲಿದೆ.

ಮಂಗಳವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ತಂಡ ಎಫ್‌ಸಿ ಗೋವಾ ತಂಡವನ್ನು 3–0 ಗೋಲುಗಳಿಂದ ಮಣಿಸಿತು.

ಜೆಜೆ ಲಾಲ್‌ಪೆಖ್ಲುವಾ 26 ಮತ್ತು 90ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಂಚಿದರು. 29ನೇ ನಿಮಿಷದಲ್ಲಿ ಧನಪಾಲ್ ಗಣೇಶ್ ಅವರು ಚೆನ್ನೈಯಿನ್ ತಂಡದ ಪರ ಮತ್ತೊಂದು ಗೋಲು ಗಳಿಸಿದರು.

ADVERTISEMENT

17ರಂದು ಬೆಂಗಳೂರಿನ ಕಂಠೀ ರವ ಕ್ರಿಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. 11ರಂದು ನಡೆದ ‍ಮೊದಲನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಎಫ್‌ಸಿ ಪುಣೆಯನ್ನು ಮಣಿಸಿ ಬಿಎಫ್‌ಸಿ ಫೈನಲ್‌ಗೆ ಪ್ರವೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.