ADVERTISEMENT

ಬ್ಯಾಡ್ಮಿಂಟನ್: ಫೈನಲ್‌ಗೆ ಶಿಖಾ ಗೌತಮ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಬೆಂಗಳೂರು: ಶಿಖಾ ಗೌತಮ್ ಇಲ್ಲಿ ನಡೆಯುತ್ತಿರುವ ಲೀ ನಿಂಗ್ ಫೈವ್ ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶಿಖಾ 21-16, 21-9ರಲ್ಲಿ ಮೀರಾ ಮಹಾದೇವನ್ ಎದುರು ಗೆಲುವು ಸಾಧಿಸಿದರು. ಇದೇ ವಿಭಾಗದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಜಾಕ್ವೆಲಿನ್ ರೋಸ್ ಕುನ್ನತ್ 21-17, 23-21ರಲ್ಲಿ ರಿತು ಮಿಶಾ ವಿ. ಎದುರು ಜಯಿಸಿದರು.

ಮಿಶ್ರ ಡಬಲ್ಸ್‌ನಲ್ಲಿ ಅಭಿನಂದ್ ಶೆಟ್ಟಿ-ಸಂಗೀತಾ ಮೇರಿ ಜೋಡಿ ಫೈನಲ್ ಹಣಾಹಣಿಯಲ್ಲಿ 17-21, 21-18, 21-17ರಲ್ಲಿ ಆದರ್ಶ್ ಕುಮಾರ್ ಎಸ್.-ವರ್ಷಾ ಬೆಳವಾಡಿ ಎದುರು ಜಯ ಪಡೆದು ಪ್ರಶಸ್ತಿ ಗೆದ್ದುಕೊಂಡರು.

ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅನೂಪ್ ಶ್ರೀಧರ್ 21-17, 17-1ರಲ್ಲಿ (ನಿವೃತ್ತಿ) ಕಾರ್ತಿಕೇಯ ಅವರನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಇತರ ಪಂದ್ಯಗಳಲ್ಲಿ  ಅಭಿಷೇಕ್ ಯಲಿಗಾರ್ 21-18, 21-13ರಲ್ಲಿ ರೋಹನ್ ಕ್ಯಾಸ್ಟೆಲಿನೊ ಮೇಲೂ, ಸೂರಜ್ ಆರ್.ಎನ್. 21-15, 21-16ರಲ್ಲಿ ಸಂಕೀರ್ತ್ ಬಿ.ಆರ್. ವಿರುದ್ಧವೂ, ಡೇನಿಯನ್ ಫರೀದ್ 21-19, 21-12ರಲ್ಲಿ ರಿಷಿಕೇಶ್ ಯಲಿಗಾರ್ ಮೇಲೂ ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.