ADVERTISEMENT

ಬ್ಯಾಸ್ಕೆಟ್‌ಬಾಲ್‌: ಸುರಾನಾ ಕಾಲೇಜು ತಂಡಕ್ಕೆ ಕಿರೀಟ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಚಾಂಪಿಯನ್ ಆದ ಸುರಾನಾ ಕಾಲೇಜು ತಂಡ (ನಿಂತವರು; ಎಡದಿಂದ ಬಲಕ್ಕೆ); ವಿನೋದ್, ಮುಫೀಜ್‌, ಮೋಹನ್‌, ಶೀತಲ್‌ ಕಿರಣ್‌ (ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರು), ಶಕುಂತಲಾ ಸ್ಯಾಮುಯಲ್ಸನ್‌ (ಪ್ರಾಂಶುಪಾಲರು), ಚಂದ್ರಶೇಖರಪ್ಪ (ಪಿಯುಸಿ ವಿಭಾಗದ ಪ್ರಾಂಶುಪಾಲರು), ಸುಕೇಶ್‌, ವಿವೇಕ್‌, ಚೇತನ್‌, ಕಾರ್ತಿಕ್‌ (ಕುಳಿತವರು); ತೇಜಸ್‌, ಮುಕೇಶ್‌.

ಬೆಂಗಳೂರು: ಉತ್ತಮ ಆಟದ ಮೂಲಕ ಗಮನ ಸೆಳೆದ ಸುರಾನಾ ಕಾಲೇಜು ತಂಡ ಬೆಂಗಳೂರು ವಿಶ್ವವಿದ್ಯಾಲಯ ವತಿಯ ಅಂತರ ಕಾಲೇಜುಗಳ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಚಾಂಪಿಯನ್ ಆಗಿದೆ.

ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಸುರಾನಾ ಕಾಲೇಜಿನ ಬಾಲಕರ ತಂಡ ಆಡಿದ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿತು. ವಿಜಯೀ ತಂಡ 63–33ರಲ್ಲಿ ಸಿಎಮ್‌ಆರ್‌ಐಎಮ್‌ಎಸ್‌ ವಿರುದ್ಧವೂ, 75–65ರಲ್ಲಿ ಸಿಂಧಿ ಕಾಲೇಜು ಮೇಲೂ, ಅಂತಿಮ ಪಂದ್ಯದಲ್ಲಿ 56–44ರಲ್ಲಿ ಎಸ್‌ಜೆಸಿಸಿ ಎದುರೂ ಗೆದ್ದಿತು.

ಎಸ್‌ಜೆಸಿಸಿ ತಂಡ ಎರಡನೇ ಸ್ಥಾನ ಪಡೆದರೆ ಸಿಂಧಿ ಕಾಲೇಜು ಹಾಗೂ ಸಿಎಮ್‌ಆರ್‌ಐಎಮ್‌ಎಸ್‌ ಕಾಲೇಜು ತಂಡಗಳು ನಂತರದ ಸ್ಥಾನ ಗಳಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.