ADVERTISEMENT

ಭಾಕರ್‌–ಓಂ ಪ್ರಕಾಶ್‌ಗೆ ಚಿನ್ನ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಓಂ ಪ್ರಕಾಶ್‌ ಮಿಥಾರ್ವಲ್‌ ಮತ್ತು ಮನು ಭಾಕರ್‌ ಪದಕದೊಂದಿಗೆ ಖುಷಿ ಪಟ್ಟರು. ‍–ಪಿಟಿಐ ಚಿತ್ರ
ವಿಶ್ವಕಪ್‌ ಶೂಟಿಂಗ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಓಂ ಪ್ರಕಾಶ್‌ ಮಿಥಾರ್ವಲ್‌ ಮತ್ತು ಮನು ಭಾಕರ್‌ ಪದಕದೊಂದಿಗೆ ಖುಷಿ ಪಟ್ಟರು. ‍–ಪಿಟಿಐ ಚಿತ್ರ   

ನವದೆಹಲಿ: ಭಾರತದ ಮನು ಭಾಕರ್‌ ಮತ್ತು ಓಂ ಪ್ರಕಾಶ್‌ ಮಿಥಾ ರ್ವಲ್‌, ಮೆಕ್ಸಿಕೊದ ಗುವಾಡಲಾಜರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಸೋಮವಾರ ನಡೆದ 10 ಮೀಟರ್ಸ್‌ ಏರ್‌ ‍ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಭಾಕರ್‌ ಮತ್ತು ಓಂ ಪ್ರಕಾಶ್‌ 476.1 ಪಾಯಿಂಟ್ಸ್‌ ಸಂಗ್ರಹಿಸಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಜರ್ಮನಿಯ ಸಾಂಡ್ರಾ ಮತ್ತು ಕ್ರಿಸ್ಟಿಯನ್‌ ರಿಟ್ಜ್‌ ಬೆಳ್ಳಿ ಗೆದ್ದರು. ಈ ಜೋಡಿ 475.2 ಪಾಯಿಂಟ್ಸ್‌ ಕಲೆಹಾಕಿತು.

ಫ್ರಾನ್ಸ್‌ನ ಸೆಲಿನೆ ಗೊಬರ್‌ವಿಲ್ಲೆ ಮತ್ತು ಫ್ಲೋರಿಯಾನ್‌ ಫೌಕ್ವೆಟ್‌ (415.1 ಪಾ) ಕಂಚು ತಮ್ಮದಾಗಿಸಿಕೊಂಡರು.

ADVERTISEMENT

ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಭಾಗವಹಿಸಿರುವ 16 ವರ್ಷದ ಭಾಕರ್‌ ಈ ಬಾರಿ ಗೆದ್ದ ಎರಡನೇ ಚಿನ್ನ ಇದಾಗಿದೆ. ಭಾನುವಾರ ನಡೆದಿದ್ದ ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲೂ ಅವರು ಮೊದಲ ಸ್ಥಾನ ಗಳಿಸಿದ್ದರು. ಹರಿಯಾಣದ ಜಾಜ್ಜರ್‌ನವರಾದ ಭಾಕರ್‌, ಪ್ರಥಮ ಪಿ.ಯು.ಸಿ ಓದುತ್ತಿದ್ದಾರೆ.

ಮೆಹುಲಿ–ದೀಪಕ್‌ಗೆ ಕಂಚು: 10 ಮೀಟರ್ಸ್‌ ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ದೀಪಕ್‌ ಕುಮಾರ್‌ ಮತ್ತು ಮೆಹುಲಿ ಘೋಷ್‌ ಕಂಚಿನ ಸಾಧನೆ ಮಾಡಿದರು. ಫೈನಲ್‌ನಲ್ಲಿ ಮೆಹುಲಿ ಮತ್ತು ದೀಪಕ್‌ 435.1 ಪಾಯಿಂಟ್ಸ್‌ ಹೆಕ್ಕಿದರು. ಚೀನಾದ ಕ್ಸು ಹಾಂಗ್‌ ಮತ್ತು ಚೆನ್‌ ಕೆಡುವೊ ಚಿನ್ನ ಗೆದ್ದರು. ಈ ಜೋಡಿ 502.0 ಪಾಯಿಂಟ್ಸ್‌ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.