ADVERTISEMENT

‘ಭಾರತ, ಚೀನಾಗೆ ಉತ್ತರದಾಯಿತ್ವ ಇಲ್ಲ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
‘ಭಾರತ, ಚೀನಾಗೆ ಉತ್ತರದಾಯಿತ್ವ ಇಲ್ಲ’
‘ಭಾರತ, ಚೀನಾಗೆ ಉತ್ತರದಾಯಿತ್ವ ಇಲ್ಲ’   

ವಾಷಿಂಗ್ಟನ್‌: ಪ್ಯಾರಿಸ್‌ ಹವಾಮಾನ ಒಪ್ಪಂದದಲ್ಲಿ ಭಾರತ ಮತ್ತು ಚೀನಾ ಉತ್ತರದಾಯಿತ್ವ ಹೊಂದಿಲ್ಲ ಎಂದು ಹೇಳುವ ಮೂಲಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಒಪ್ಪಂದದಿಂದ ಹಿಂದೆ ಸರಿದ ನಿಲುವನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

‘ಹಸಿರುಮನೆ ಪರಿಣಾಮ ನಿಯಂತ್ರಣ ಸಂಬಂಧ ಚೀನಾವು 2030ರವರೆಗೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ₹1.61 ಲಕ್ಷ ಕೋಟಿ ನೆರವು ಲಭಿಸುವ ತನಕ ಭಾರತ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕೆಲಸ ನಿರ್ವಹಿಸುವುದಿಲ್ಲ’ ಎಂದು ಅಮೆರಿಕದ ಪರಿಸರ ಸಂರಕ್ಷಣಾ ಏಜೆನ್ಸಿಯ ಆಡಳಿತಾಧಿಕಾರಿ ಸ್ಕಾಟ್‌ ಫ್ರುಟ್ಟಿ ಹೇಳಿದ್ದಾರೆ.

ರಷ್ಯಾವು ಇಂಗಾಲದ ಹೊರಸೂಸುವಿಕೆಯ ಪ್ರಮಾಣ ತಗ್ಗಿಸಲು  1990ರವರೆಗೆ ಗಡುವು ಹಾಕಿಕೊಂಡಿತ್ತು. ಆದರೆ, ಆ ದೇಶದಲ್ಲಿ ಇಂಗಾಲದ ಪ್ರಮಾಣ ಹೆಚ್ಚಿದೆ ಎಂದು ಹೇಳಿದ್ದಾರೆ.

ADVERTISEMENT

ಪ್ಯಾರಿಸ್‌ ಒಪ್ಪಂದಕ್ಕೆ 150 ದೇಶಗಳು ಸಹಿ ಹಾಕಿವೆ. ಅಮೆರಿಕದಲ್ಲಿ ಶೇ 26ರಿಂದ 28ರಷ್ಟು ಹಸಿರುಮನೆ ಪರಿಣಾಮವನ್ನು ತಗ್ಗಿಸಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲೂ ತಾಪಮಾನ ತಗ್ಗಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಪ್ಪಂದದಿಂದ ಟ್ರಂಪ್‌ ಹಿಂದೆ ಸರಿಯುವ ಮೂಲಕ ದಿಟ್ಟನಿರ್ಧಾರ ಪ್ರದರ್ಶಿಸಿದ್ದಾರೆ. ದೇಶದ ಹಿತಾಸಕ್ತಿ ಕಾಪಾಡಲು ಮೊದಲ ಆದ್ಯತೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

1990ಕ್ಕಿಂತ ಮುಂಚೆಯೇ ಅಮೆರಿಕದಲ್ಲಿ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಲಾಗಿದೆ. ನೈಸರ್ಗಿಕ ಇಂಧನ ಬಳಕೆಯ ತಂತಜ್ಞಾನವನ್ನು ಇಡೀ ವಿಶ್ವಕ್ಕೆ  ರಪ್ತು ಮಾಡಲು ಸಿದ್ಧರಿದ್ದೇವೆ. ಈ ನೆರವು ಜಾಗತಿಕ ತಾಪಮಾನ ನಿಯಂತ್ರಣಕ್ಕೆ  ನೆರವಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.