ADVERTISEMENT

ಭಾರತ ತಂಡಗಳಿಗೆ ನಿರಾಸೆ

ಪಿಟಿಐ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST

ಗೋಲ್ಡ್‌ ಕೋಸ್ಟ್‌: ಭಾರತದ ಪುರುಷರ ಮತ್ತು ಮಹಿಳೆಯರ ಬ್ಯಾಸ್ಕೆ ಟ್‌ಬಾಲ್‌ ತಂಡದವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಗುರುವಾರ ನಿರಾಸೆ ಕಂಡರು.

ಮಹಿಳೆಯರ ‘ಬಿ’ ಗುಂಪಿನ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಭಾರತ 57–66 ಪಾಯಿಂಟ್ಸ್‌ನಿಂದ ಜಮೈಕಾ ತಂಡಕ್ಕೆ ಶರಣಾಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದ ಭಾರತದ ವನಿತೆಯರು ಮೊದಲ ಕ್ವಾರ್ಟರ್‌ನಲ್ಲಿ ಎದು ರಾಳಿಗಳಿಗೆ ಪ್ರಬಲ ಪೈಪೋಟಿ ನೀಡಿ 14 ಪಾಯಿಂಟ್ಸ್‌ ಹೆಕ್ಕಿದರು. ಎರಡು ಮತ್ತು ಮೂರನೆ ಕ್ವಾರ್ಟರ್‌ಗಳಲ್ಲೂ ಭಾರತ ಮಿಂಚಿತು. ಹೀಗಿದ್ದರೂ ಮುನ್ನಡೆ ಗಳಿಸಲು ಆಗಲಿಲ್ಲ. ನಾಲ್ಕನೆ ಕ್ವಾರ್ಟರ್‌ನಲ್ಲಿ ಪ್ರಾಬಲ್ಯ ಮೆರೆದ ಜಮೈಕಾ ತಂಡ ಒಂಬತ್ತು ಪಾಯಿಂಟ್ಸ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ADVERTISEMENT

ಪುರುಷರ ವಿಭಾಗದ ‘ಬಿ’ ಗುಂಪಿನ ಮೊದಲ ಹಣಾಹಣಿಯಲ್ಲಿ ಭಾರತ 87–96 ಪಾಯಿಂಟ್ಸ್‌ನಿಂದ ಕ್ಯಾಮರೂನ್‌ ವಿರುದ್ಧ ಸೋತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.