ಕೋಲ್ಕತ್ತ (ಐಎಎನ್‌ಎಸ್): ಮೀರ್‌ಪುರದಲ್ಲಿ ಸಚಿನ್ ತೆಂಡೂಲ್ಕರ್ ಶತಕ ಗಳಿಸಿ ಸಂಭ್ರಮಿಸುತ್ತಿದ್ದರೆ, ಇತ್ತ ತಾಯಿ ನಾಡು ಭಾರತದಲ್ಲಿ `ಭಾರತ ರತ್ನ~ ನೀಡಬೇಕು ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.`ಶತಕಗಳ ಶತಕ~ ಮಹಾ ಸಾಧನೆ ಮೂಡಿ ಬಂದ ಕ್ಷಣದಿಂದಲೇ ಜಗತ್ತಿನ ವಿವಿಧ ಭಾಗಗಳಿಂದ ಅಭಿನಂದನೆ, ಹೊಗಳಿಕೆಗಳ ಮಹಾಪೂರವೇ ಮುಂಬೈಕರ್ ಮಡಿಲು ಮುಟ್ಟುತ್ತಿವೆ.
ಪಶ್ವಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ ನಮ್ಮ ದೇಶದ ಆಟಗಾರನಿಗೆ `ಭಾರತ ರತ್ನ~ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರನೇ ಶತಕದ ಸಾಧನೆ ಮಾಡಿದ ಸಚಿನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಲಗೈ ಬ್ಯಾಟ್ಸ್‌ಮನ್‌ಗೆ ಅಭಿಮಾನಿಗಳು, ಹಿತೈಷಿಗಳು ಈ ಗೌರವವನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.