ADVERTISEMENT

ಮಹಿಳಾ ಪೈಕಾ ಕ್ರೀಡಾಕೂಟ: ಬೆಂಗಳೂರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಹಾವೇರಿ: ನಿರೀಕ್ಷೆಯಂತೆ ಬೆಂಗಳೂರು ತಂಡ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ `ಪೈಕಾ~ ರಾಜ್ಯ ಮಟ್ಟದ ಮಹಿಳಾ ಕ್ರೀಡಾಕೂಟದ ಈಜು ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಜಿಮ್ನಾಸ್ಟಿಕ್ಸ್ ವಿಭಾಗದ ಪ್ರಶಸ್ತಿಯನ್ನು ಗದಗ ಜಿಲ್ಲೆ ಬಗಲಿಗೆ ಹಾಕಿಕೊಂಡರೆ ಬ್ಯಾಸ್ಕೆಟ್‌ಬಾಲ್ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 

ಈಜು ಸ್ಪರ್ಧೆಯಲ್ಲಿ ಆರಂಭದಿಂದಲೇ ಪಾರುಪತ್ಯ ಸಾಧಿಸಿದ್ದ ಬೆಂಗಳೂರಿನ  ಈಜುಪಟುಗಳು ಒಟ್ಟು 80 ಪಾಯಿಂಟ್ ಕಲೆ ಹಾಕಿ ಕೇಕೆ ಹಾಕಿತು. 32 ಪಾಯಿಂಟ್ ಸಂಪಾದಿಸಿದ ಧಾರವಾಡ ಜಿಲ್ಲಾ ತಂಡ ದ್ವಿತೀಯ ಹಾಗೂ ತಲಾ 11 ಹನ್ನೊಂದು ಪಾಯಿಂಟ್ ಗಳಿಸಿದ ಮಂಡ್ಯ ಮತ್ತು ಹಾಸನ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು.


100 ಮೀ.  ಹಾಗೂ 400 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 200 ಮೀ. ಇಂಡಿವಿಜುವಲ್ ಮಿಡ್ಲೇಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ನಗರ ತಂಡದ ಕೀರ್ತನಾ ಆರ್, ವೈಯಕ್ತಿಕ ಚಾಂಪಿಯನ್ ಆಗಿ ಮೆರೆದರು.

4x100 ಫ್ರೀಸ್ಟೈಲ್ ರಿಲೇ ಹಾಗೂ 4x100 ಮಿಡ್ಲೆ ರಿಲೇಯ ಬಹುಮಾನವನ್ನು ಕೂಡ ಶ್ರೀಕಾ ಆರ್. ನೇತೃತ್ವದ ಬೆಂಗಳೂರು ತನ್ನ ಪಾಲಾಗಿಸಿತು.

ಬ್ಯಾಸ್ಕೆಟ್‌ಬಾಲ್‌ನಲ್ಲಿ  ಬೆಂಗಳೂರು ಗ್ರಾಮಾಂತರ ತಂಡ ಕೊಡಗು ತಂಡವನ್ನು 15 ಪಾಯಿಂಟ್ (31-16) ಗಳಿಂದ ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೂರನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಬೆಳಗಾವಿ ತಂಡ ಶಿವಮೊಗ್ಗ ತಂಡವನ್ನು (20-16) ಸೋಲಿಸಿತು.

ಫಲಿತಾಂಶಗಳು:
100 ಮೀ. ಬ್ಯಾಕ್‌ಸ್ಟ್ರೋಕ್: ಕೀರ್ತನಾ ಆರ್ (1.11.59) ಬೆಂ. ನಗರ-1,
ಸೃಷ್ಟಿ ರಮೇಶ (1.20.15 ಸೆ.)ಬೆಂ. ಗ್ರಾಮಾಂತರ-2,   ಸ್ಫೂರ್ತಿ ಪಾಟೀಲ (1.27.57 ಸೆ.) ಧಾರವಾಡ-3.
200 ಮೀ. ಬ್ರೆಸ್ಟ್‌ಸ್ಟ್ರೋಕ್: ಸಿಮ್ರನ್ ಎಂ. (2:34.19) ಬೆಂ. ನಗರ-1, ಋತ್ವಿಕಾ ಹುಳ್ಳೂರು (2:48.75)  ಧಾರವಾಡ-2, ನಿಕಿತಾ ಪಾಟೀಲ (3:07.78) ಧಾರವಾಡ-3. 

200 ಮೀ. ಐ.ಎಂ: ಕೀರ್ತನಾ ಆರ್ (2.53.16 ಸೆ.)-1, ಸೃಷ್ಟಿ ರಮೇಶ ( 3.04.25ಸೆ.)-2, ಋತ್ವಿಕಾ ಎಂ.ಹುಳ್ಳೂರು (3.27.26 ಸೆ.)-3.

4 x 100 ಮೀ. ಫ್ರೀಸ್ಟೈಲ್ ರಿಲೇ: ಬೆಂಗಳೂರು ನಗರ (5.26.31 ಸೆ.)-1, ಹಾಸನ (6:32.28 ಸೆ.)-2, ಧಾರವಾಡ (6:53.82 ಸೆ.)-3, 4 x100 ಮಿ.ಮಿಡ್ಲೆ ರಿಲೇ: ಬೆಂಗಳೂರು ನಗರ (5:26.31ಸೆ.)-1, ಧಾರವಾಡ (6:27.12)-2, ಹಾಸನ (7:04.75 ಸೆ.)-3.

ಜಿಮ್ನಾಸ್ಟಿಕ್ಸ್: ನಾಗವೇಣಿ ಕಡಗದ  (ಗದಗ-36.65 ಪಾಯಿಂಟ್)-1 ಅರ್ಚನಾ ಜಿ. (ತುಮಕೂರು-32.55)-2, ದಿವ್ಯಾ ತಳವಾರ (ಗದಗ -32.35)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT