ADVERTISEMENT

ಮಿಥಾಲಿ ರಾಜ್ ವಿಶ್ವದಾಖಲೆಗೆ ಕ್ರಿಕೆಟ್‌ ದಿಗ್ಗಜರ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:12 IST
Last Updated 13 ಜುಲೈ 2017, 11:12 IST
ಮಿಥಾಲಿ ರಾಜ್
ಮಿಥಾಲಿ ರಾಜ್   

ಬ್ರಿಸ್ಟನ್: ಭಾರತ ವನಿತೆಯರ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ‘ಬ್ಯಾಟ್ಸ್‌ವುಮನ್’ ಆಗಿ ಹೊರ ಹೊಮ್ಮಿದರು. ಅವರು ಆರು ಸಾವಿರ ರನ್‌ಗಳ ಗಡಿಯನ್ನು ದಾಟಿದರು.

ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ಆಸ್ಟ್ರೇಲಿಯಾ ಎದುರು ಮಿಥಾಲಿ ರಾಜ್ (69ರನ್) ಅರ್ಧಶತಕ ದಾಖಲಿಸಿದರು. ಅದರೊಂದಿಗೆ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ (5992 ರನ್) ಅವರ ದಾಖಲೆಯನ್ನು ಮೀರಿ ನಿಂತರು. ಮಿಥಾಲಿ ಅವರಿಗೆ ಇದು 183ನೇ ಏಕದಿನ ಪಂದ್ಯವಾಗಿದೆ.

ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 6,000 ರನ್ ಗಳಿಸಿದ ‘ಬ್ಯಾಟ್ಸ್‌ವುಮನ್’ ಎಂಬ ಹೆಗ್ಗಳಿಕೆಗೆ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ. ಈ ಹಿಂದೆ 5,992 ರನ್ ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್‌ ಅವರ ಹೆಸರಿನಲ್ಲಿದ್ದ ಈ ದಾಖಲೆಯನ್ನು ಮಿಥಾಲಿ ಮೀರಿ ನಿಂತರು.

ADVERTISEMENT

ಮಿಥಾಲಿ ರಾಜ್‌ ಅವರ ಸಾಧನೆ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ), ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಭಾರತದ ಕ್ರಿಕೆಟ್‌ ಆಟಗಾರರಾದ ಸಚಿನ್‌ ತೆಂಡೂಲ್ಕರ್‌, ಅನಿಲ್‌ ಕುಂಬ್ಳೆ, ಗೌತಮ್‌ ಗಂಭೀರ್‌, ಮೊಹಮ್ಮದ್‌ ಕೈಫ್‌, ವಿರಾಟ್‌ ಕೊಹ್ಲಿ, ರಹಾನೆ, ಮನೋಜ್‌ ತಿವಾರಿ, ಹರ್ಭಜನ್‌ ಸಿಂಗ್‌, ಟ್ವೀಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.