ADVERTISEMENT

ಮುಂಬೈಗೆ ಮಹತ್ವದ ಪಂದ್ಯ

ಪಿಟಿಐ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಪ್ಲೇ ಆಫ್ ಹಂತ ಪ್ರವೇಶಿಸಲು ಇನ್ನೊಂದು ಸವಾಲನ್ನು ಮೀರನಿಲ್ಲಬೇಕಿದೆ. ಭಾನುವಾರ ಫಿರೂಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು ಸೋಲಿಸಬೇಕಿದೆ.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಸದ್ಯ ಪಾಯಿಂಟ್‌ ಪಟ್ಟಿಯಲ್ಲಿ 12 ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ.  ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ತಂಡವು ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿದೆ. ಸನ್‌ರೈಸರ್ಸ್‌ ಹೈದರಾಬಾದ್ (18 ಅಂಕ) ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (16 ಅಂಕ) ಈಗಾಗಲೇ ನಾಕೌಟ್ ಹಂತ ತಲುಪಿವೆ. ಉಳಿದ ಎರಡು ಸ್ಥಾನಗಳಿಗಾಗಿ ಕೋಲ್ಕತ್ತ ನೈಟ್‌ರೈಡರ್ಸ್ (!4 ಪಾಯಿಂಟ್), ರಾಜಸ್ಥಾನ್ ರಾಯಲ್ಸ್‌, ಆರ್‌ಸಿಬಿ ಮತ್ತು ಮುಂಬೈ ತಂಡಗಳು ಪ್ರಯತ್ನಿಸುತ್ತಿವೆ.

‍ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್‌ (14 ಪಾಯಿಂಟ್) ಶನಿವಾರ ರಾತ್ರಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಆಡುತ್ತಿರುವ ಪಂದ್ಯದಲ್ಲಿ ಸೋತು, ಮುಂಬೈ ಡೆಲ್ಲಿ ವಿರುದ್ಧ ಗೆದ್ದರೆ ಪ್ಲೇ ಆಫ್ ಅವಕಾಶ ಖಚಿತವಾಗಲಿದೆ.  ಒಂದೊಮ್ಮೆ ಕೆಕೆಆರ್ ಗೆದ್ದರೆ  ಮುಂಬೈಗೆ ಸಂಕಷ್ಟ ಖಚಿತ. ಆದರೆ ಡೆಲ್ಲಿ ವಿರುದ್ಧದ ಪಂದ್ಯವನ್ನು ಮುಂಬೈ ಹಗುರವಾಗಿ ಪರಿಗಣಿಸುವಂತಿಲ್ಲ.

ADVERTISEMENT

ಶುಕ್ರವಾರ ಡೆಲ್ಲಿ ತಂಡವು ಬಲಿಷ್ಠ ಸಿಎಸ್‌ಕೆ ತಂಡವನ್ನು ಸೋಲಿಸಿತ್ತು. ಪೃಥ್ವಿ ಶಾ, ನಾಯಕ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇವರು ಮುಂಬೈ ಬೌಲರ್‌ಗಳಾದ ಮಿಷೆಲ್ ಮೆಗ್‌ಲೆಂಘಾನ್, ಹಾರ್ದಿಕ್ ಪಾಂಡ್ಯ ಮತ್ತು ಮಯಂಕ್ ಮಾರ್ಕಂಡೆ ಅವರಿಗೆ ಸವಾಲೊಡ್ಡಬಲ್ಲರು.  ಸೂರ್ಯ ಕುಮಾರ್ ಯಾದವ್, ಎವಿನ್ ಲೂಯಿಸ್ ಮತ್ತು ಇಶಾನ್ ಕಿಶಾನ್ ಬ್ಯಾಟಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.