ADVERTISEMENT

ಮೆರ್ಜೂಗಾ ರ‍್ಯಾಲಿ: ಕರ್ನಾಟಕದ ಸಂತೋಷ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:07 IST
Last Updated 12 ಏಪ್ರಿಲ್ 2018, 19:07 IST
ಸಂತೋಷ್‌
ಸಂತೋಷ್‌   

ಬೆಂಗಳೂರು: ಮೊರೊಕ್ಕೊದಲ್ಲಿ ಇದೇ 15ರಿಂದ 20ರವರೆಗೆ ನಡೆಯಲಿರುವ ಮೆರ್ಜೂಗಾ ರ‍್ಯಾಲಿ–2018ರಲ್ಲಿ ಕರ್ನಾಟಕದ ಮೋಟಾರು ಬೈಕ್‌ ರೇಸ್‌ ಸಾಹಸಿ ಸಿ. ಎಸ್‌. ಸಂತೋಷ್‌ ಅವರು ಸ್ಪರ್ಧಿಸಲಿದ್ದಾರೆ.

ಈ ರ‍್ಯಾಲಿಯಲ್ಲಿ ಸಂತೋಷ್‌ ಅವರೊಂದಿಗೆ ಓರಿಯೋಲ್‌ ಮೆನಾ ಕೂಡ ಹೀರೊ ಮೋಟೊಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದರ ಜೊತೆಗೆ ಹೀರೊ ಮೋಟೊಸ್ಪೋರ್ಟ್ಸ್ ತಂಡವು  2019ರ ಡಕಾರ್ ರ‍್ಯಾಲಿಗೆ ಅಭಿಯಾನವನ್ನೂ ಆರಂಭಿಸಲಿದೆ. ಈಚೆಗೆ ನಡೆದಿದ್ದ ಡಕಾರ್‌ ರ‍್ಯಾಲಿಯಲ್ಲಿ ಓರಿಯೋಲ್‌ ಮೆನಾ ಅವರು 7ನೇ ಸ್ಥಾನ ಹಾಗೂ ಸಂತೋಷ್‌ ಅವರು 35ನೇ ಸ್ಥಾನ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.