ADVERTISEMENT

ರಾಜ್ಯದ ಅರ್ಪಿತಾಗೆ ಚಿನ್ನ

ಪಿಟಿಐ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ರಾಷ್ಟ್ರೀಯ ದಾಖಲೆ ನಿರ್ಮಿಸಿದ ತಮಿಳುನಾಡಿನ ಅಥ್ಲೀಟ್ ಅಯ್ಯಸ್ವಾಮಿ ಧರುಣ್‌
ರಾಷ್ಟ್ರೀಯ ದಾಖಲೆ ನಿರ್ಮಿಸಿದ ತಮಿಳುನಾಡಿನ ಅಥ್ಲೀಟ್ ಅಯ್ಯಸ್ವಾಮಿ ಧರುಣ್‌   

ಪಟಿಯಾಲ: ಕರ್ನಾಟಕದ ಎಮ್‌.ಅರ್ಪಿತಾ ಇಲ್ಲಿ ನಡೆಯುತ್ತಿರುವ ಫೆಡರೇಷನ್‌ ಕಪ್ ರಾಷ್ಟ್ರೀಯ ಸೀನಿಯರ್ ಚಾಂಪಿಯನ್‌ಷಿಪ್‌ನ 400 ಮೀಟರ್ಸ್‌ ಹರ್ಡಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದುಕೊಂಡಿದ್ದಾರೆ.

ಅರ್ಪಿತಾ 57.43 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿ ಸೇರಿದರು. ಕೇರಳದ ಆರ್‌.ಅನು (58.05ಸೆ) ಬೆಳ್ಳಿ ಗೆದ್ದರೆ, ಪಂಜಾಬ್‌ನ ವೀರಪಾಲ್‌ ಕೌರ್‌ (1:01.72ಸೆ) ಕಂಚಿಗೆ ಕೊರಳೊಡ್ಡಿದರು.

ತಮಿಳುನಾಡಿನ ಅಥ್ಲೀಟ್ ಅಯ್ಯಸ್ವಾಮಿ ಧರುಣ್‌ ಪುರುಷರ 400ಮೀಟರ್ಸ್‌ ಹರ್ಡಲ್ಸ್‌ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. 49.45 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ಚಿನ್ನ ಗೆದ್ದರು.

ADVERTISEMENT

ಟ್ರಿಪಲ್‌ ಜಂಪ್‌ ವಿಭಾಗದಲ್ಲಿ ಹರಿಯಾಣದ ಅರ್ಪಿಂದರ್ ಸಿಂಗ್‌ (16.61ಮೀಟರ್ಸ್‌) ಚಿನ್ನ ಗೆಲ್ಲುವ ಮೂಲಕ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದರು.

ಪುರುಷರ 110ಮೀ ಹರ್ಡಲ್ಸ್‌ ವಿಭಾಗದಲ್ಲಿ ಕರ್ನಾಟಕದ ಸಿ.ಶಿವಕುಮಾರ (14.33,3) ಕಂಚು ಗೆದ್ದರು. ಇದೇ ವಿಭಾಗದ ಮಹಿಳೆಯರಲ್ಲಿ ಪ್ರಜ್ಞಾ ಪ್ರಕಾಶ್‌ (14.13) ಬೆಳ್ಳಿ ಗೆದ್ದರು. ಪಿ.ಜೆ ಸ್ನೇಹಾ (24.47, 2) ಮಹಿಳೆಯರ 200ಮೀಟರ್ಸ್‌ ಓಟ ವಿಭಾಗದಲ್ಲಿ ಬೆಳ್ಳಿ ಗೆದ್ದರು.

ಶಾಟ್‌ಪಟ್ ವಿಭಾಗದಲ್ಲಿ ರಾಜ್ಯದ ಉಮಾ ಪಿ.ಎಸ್‌ (14.66) ಕಂಚು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.