ADVERTISEMENT

ರಾಣಿ ಚನ್ನಮ್ಮ ವಿವಿ ಸೈಕ್ಲಿಂಗ್ ಟೂರ್ನಿ 28ರಿಂದ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಜಮಖಂಡಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯೊಳಗೆ ಬರುವ ಪದವಿ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರಿಗಾಗಿ ಸೈಕ್ಲಿಂಗ್ ಟೂರ್ನಿಯನ್ನು ಇದೇ 28 ರಿಂದ 30 ವರೆಗೆ ಜಮಖಂಡಿಯ ಬಿಎಲ್‌ಡಿಇಎ ಕಾಲೇಜು ಅಶ್ರಯದಲ್ಲಿ ಏರ್ಪಡಿಸಲಾಗುವುದು ಎಂದು ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಕಾಲೇಜುಗಳ ಪ್ರಾಚಾರ್ಯರು ತಮ್ಮ ಕಾಲೇಜುಗಳ ಸೈಕ್ಲಿಸ್ಟ್‌ಗಳ ಅರ್ಹತಾ ಹಾಗೂ ಪ್ರವೇಶ ಪತ್ರಗಳನ್ನು ಇದೇ 27 ರೊಳಗಾಗಿ ತಲುಪುವಂತೆ ಕಳುಹಿಸಲು ಅವರು ಕೋರಿದ್ದಾರೆ. ವಿವರಗಳಿಗಾಗಿ ಕೆ.ಎ.ಶಿರಹಟ್ಟಿ (ಮೊ.9964541008) ಅಥವಾ ದೂರವಾಣಿ ಸಂಖ್ಯೆ (08353) 220003 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.