ADVERTISEMENT

ರಾಯಲ್ಸ್‌ ತಂಡಕ್ಕೆ ವಾಟ್ಸನ್‌ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): ಆಸ್ಟ್ರೇಲಿಯಾದ ಆಲ್‌ರೌಂಡರ್‌ ಶೇನ್ ವಾಟ್ಸನ್‌ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಏಳನೇ ಆವೃತ್ತಿಗೆ ರಾಜಸ್ತಾನ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

‘ವಾಟ್ಸನ್‌ ಅವರನ್ನು ನಮ್ಮ ತಂಡದ ನಾಯಕ ರನ್ನಾಗಿ ನೇಮಕ ಮಾಡಿದ್ದೇವೆ ಎಂದು ಪ್ರಕಟಿಸಲು ಖುಷಿಯಾಗು ತ್ತಿದೆ. ಅವರ ಕೌಶಲ ಮತ್ತು ಅನುಭವ ತಂಡದ ಯಶಸ್ಸಿಗೆ ಸಹಾಯಕವಾಗುತ್ತದೆ. ಜೊತೆಗೆ ಉತ್ತಮ ತಂಡವನ್ನು ಕಟ್ಟುತ್ತಾರೆ ಎನ್ನುವ ಭರವಸೆ ಯಿದೆ’ ಎಂದು ರಾಯಲ್ಸ್ ತಂಡದ ಸಿಇಎ ರಘು ಅಯ್ಯರ್‌್ ತಿಳಿಸಿದ್ದಾರೆ.

‘ರಾಯಲ್ಸ್‌ ತಂಡಕ್ಕೆ ನಾಯಕ ರಾಗುವುದೆಂದರೆ ಹೆಮ್ಮೆಯ ವಿಚಾರ. ತಂಡ ನನಗೆ ಅಮೋಘ ಅವಕಾಶ ನೀಡಿದೆ’ ಎಂದು ವಾಟ್ಸನ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಆರನೇ ಆವೃತ್ತಿಗೆ ರಾಹುಲ್‌ ದ್ರಾವಿಡ್‌ ನಾಯಕರಾಗಿದ್ದರು.

‘ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಆಟವಾಡಬೇಕು ಎನ್ನುವ ಗುರಿ ನನ್ನದು. ಅಭಿಮಾನಿಗಳು ನನ್ನ ಮೇಲಿ ಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳು ತ್ತೇನೆ. 2008ರಲ್ಲಿ ನಮ್ಮ ತಂಡದಿಂದ ಮೂಡಿ ಬಂದಿದ್ದ ಸಾಧನೆಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತೇನೆ’ ಎಂದು ವಾಟ್ಸನ್‌ ನುಡಿದಿದ್ದಾರೆ. ಚೊಚ್ಚಲ ಐಪಿಎಲ್‌ ಋತುವಿನಲ್ಲಿ ರಾಯಲ್ಸ್‌ ಚಾಂಪಿಯನ್‌ ಆಗಿತ್ತು. ಆಗ ಶೇನ್‌ ವಾರ್ನ್‌ ತಂಡವನ್ನು ಮುನ್ನಡೆಸಿದ್ದರು. 

‘ವಿಶ್ವದ ಕೆಲವೇ ಕೆಲ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ವಾಟ್ಸನ್‌ ಸಹ ಒಬ್ಬರು. ಅವರ ನಾಯಕತ್ವ ಸಮರ್ಥ ವಾಗಿದೆ’ ಎಂದು ರಾಯಲ್ಸ್‌ ತಂಡದ ನೂತನ ಸಲಹೆಗಾರ ದ್ರಾವಿಡ್‌ ಹೇಳಿದ್ದಾರೆ.

‘ಐಪಿಎಲ್‌ ಮೊದಲ ಆವೃತ್ತಿ ಯಿಂದಲೂ ವಾಟ್ಸನ್‌ ನಮ್ಮ ತಂಡದ ಜೊತೆಗಿದ್ದಾರೆ. ಆದ್ದರಿಂದ ತಂಡದ ಇತರ ಆಟಗಾರರ ಸಾಮರ್ಥ್ಯ ಚೆನ್ನಾಗಿ ಗೊತ್ತಿದೆ. ಸಿಬ್ಬಂದಿಗಳ ಜೊತೆಗೂ ಉತ್ತಮ ಸ್ನೇಹವಿದೆ. ಉತ್ಸಾಹಿ ಯುವ ಆಟಗಾರರನ್ನು ಒಳ ಗೊಂಡಿರುವ ರಾಯಲ್ಸ್‌ ತಂಡದ ನೇತೃತ್ವ ವಹಿಸಿ ಕೊಂಡಿರುವ  ವಾಟ್ಸನ್‌ ಎಲ್ಲರಿಗೂ ಸ್ಫೂರ್ತಿಯಾಗ ಲಿದ್ದಾರೆ’ ಎಂದೂ ದ್ರಾವಿಡ್‌ ನುಡಿದಿದ್ದಾರೆ.

ಹೋದ ವರ್ಷದ ಐಪಿಎಲ್‌ನಲ್ಲಿ ವಾಟ್ಸನ್‌ ತಮ್ಮ ಚೊಚ್ಚಲ ಶತಕ ಗಳಿಸಿ ದ್ದರು. ಚೆನ್ನೈ ಸೂಪರ್ ಕಿಂಗ್ಸ್‌್ ಎದುರು ಮೂರಂಕಿಯ ಗಡಿ ಮುಟ್ಟಿದ್ದರು.

ಈ ಸಲದ ಐಪಿಎಲ್‌ಗೆ ಹೋದ ತಿಂಗಳು ಬೆಂಗಳೂರಿನಲ್ಲಿ ಹರಾಜು ನಡೆದಿತ್ತು. ಪ್ರತಿ ಫ್ರಾಂಚೈಸ್‌ಗೂ ತಲಾ ಐವರು ಆಟಗಾರರನ್ನು ಉಳಿಸಿ ಕೊಳ್ಳಲು ಅವಕಾಶವಿತ್ತು. ಆದ್ದರಿಂದ ರಾಯಲ್ಸ್‌ ತಂಡ ಶೇನ್‌ ವಾಟ್ಸನ್‌, ಅಜಿಂಕ್ಯ ರಹಾನೆ, ಜೇಮ್ಸ್‌ ಫಾಕ್ನರ್‌, ಸ್ಟುವರ್ಟ್‌್ ಬಿನ್ನಿ ಮತ್ತು ಸಂಜು ಸ್ಯಾಮ್ಸನ್‌ ಅವರನ್ನು ಉಳಿಸಿಕೊಂಡಿತ್ತು.

ಸಲಹೆಗಾರರಾಗಿ ದ್ರಾವಿಡ್‌
ರಾಯಲ್ಸ್‌ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಅವರನ್ನು ತಂಡದ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಕರ್ನಾಟಕದ ದ್ರಾವಿಡ್‌ ಹೋದ ವರ್ಷ ಐಪಿಎಲ್‌ನಿಂದ ನಿವೃತ್ತಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT