ನಾಪೋಕ್ಲು (ಕೊಡಗು): ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಟೂರ್ನಿಯಲ್ಲಿ ಶನಿವಾರ ವಾಟೇರಿರ ಮತ್ತು ನಾಟೋಳಂಡ ತಂಡಗಳು ನಿಗದಿತ ಸಮಯದಲ್ಲಿ 2–2 ಗೋಲು ದಾಖಲಿಸಿ ಸಮಬಲದ ಹೋರಾಟ ನಡೆಸಿದವು. ನಂತರ, ಟೈಬ್ರೇಕರ್‌ನಲ್ಲಿ ವಾಟೇರಿರ ತಂಡವು ನಾಟೋಳಂಡ ತಂಡವನ್ನು 6–5 ಅಂತರದಲ್ಲಿ ಸೋಲಿಸಿತು.
ಬೊಪ್ಪಂಡ ತಂಡವು ಪೆಮ್ಮುಡಿಯಂಡ ತಂಡವನ್ನು 2–0 ಅಂತರದಲ್ಲಿ ಸೋಲಿಸಿತು. ರಾಕೇಶ್ ಸೋಮಯ್ಯ, ಸಜನ್ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಕಬ್ಬಚ್ಚೀರ ತಂಡದ ವಿರುದ್ಧ ಮುದ್ದಿಯಂಡ ತಂಡವು 2–0ರಲ್ಲಿ ಗೆದ್ದಿತು. ಕೋಡಿರ ತಂಡವು ಅಪ್ಪುಮಣಿಯಂಡ ತಂಡವನ್ನು 2–0 ಅಂತರದಲ್ಲಿ ಮಣಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.