ಚಂಡೀಗಡ: ಆರಂಭದಿಂದಲೂ ಪ್ರಭುತ್ವ ಮೆರೆದ ಶೇರ್ -ಎ-ಪಂಜಾಬ್ ತಂಡದವರು ಜಲಂಧರ್‌ನಲ್ಲಿ ನಡೆದ ಚೊಚ್ಚಲ ವಿಶ್ವ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದರು.
ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ 5-2ಗೋಲುಗಳಿಂದ ಚೆನ್ನೈ ಚೀತಾಸ್ ಎದುರು ವಿಜಯ ಸಾಧಿಸಿತು. ಈ ಗೆಲುವಿನ ಮೂಲಕ ಪೂರ್ಣ ಮೂರು ಪಾಯಿಂಟ್‌ಗಳನ್ನು ವಿಜಯಿ ತಂಡ ಕಲೆ ಹಾಕಿತು.
ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ಭೋಪಾಲ್ ಬಾದಷಾ ತಂಡ ಸಹ ಮೂರು ಪಾಯಿಂಟ್ ಹೊಂದಿದೆ. ಸೋತ ತಂಡಗಳು ಒಂದು ಪಾಯಿಂಟ್ ಪಡೆಯಲಿವೆ.
ಮುಂಬೈ ಮರಿನಿಸ್ ಹಾಗೂ ಪುಣೆ ಸ್ಟ್ರೈಕರ್ಸ್ ತಂಡಗಳ ನಡುವೆ ಮುಂಬೈಯಲ್ಲಿ ನಡೆದ ಪಂದ್ಯವು ರೋಚಕ ಘಟ್ಟದಲ್ಲಿ ಕೊನೆಗೊಂಡಿತು. ನಾಟಕೀಯ ತಿರುವುಗಳನ್ನು ಕಂಡ ಈ ಹಣಾಹಣಿಯಲ್ಲಿ ಪುಣೆ 7-5 ಗೋಲುಗಳ ಅಂತರದಿಂದ ಮುಂಬೈ ವಿರುದ್ಧ ವಿಜಯ ಸಾಧಿಸಿತು. ಪುಣೆ ಒಂದು ಹಂತದಲ್ಲಿ 3-1 ಗೋಲುಗಳಿಂದ ಸಾಧಿಸಿದ್ದ ಮುನ್ನಡೆ ಕಾಪಾಡಿಕೊಳ್ಳಲು ಭಾರಿ ಕಷ್ಟಪಡಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.