ADVERTISEMENT

ವೆಸ್ಟರ್ನ್‌ ರೈಲ್ವೆ ತಂಡಕ್ಕೆ ಚಾಂಪಿಯನ್‌ ಪಟ್ಟ

ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿ; ಸೌತ್‌ ಸೆಂಟ್ರಲ್‌ ರೈಲ್ವೆ ತಂಡಕ್ಕೆ ಕಾಡಿದ ನಿರಾಸೆ

ಪಿಟಿಐ
Published 16 ಜೂನ್ 2017, 19:34 IST
Last Updated 16 ಜೂನ್ 2017, 19:34 IST
ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿಯಲ್ಲಿ ಚಾಂಪಿಯನ್‌ ಆದ ವೆಸ್ಟರ್ನ್‌ ರೈಲ್ವೆ ತಂಡ ಪ್ರಜಾವಾಣಿ ಚಿತ್ರ
ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿಯಲ್ಲಿ ಚಾಂಪಿಯನ್‌ ಆದ ವೆಸ್ಟರ್ನ್‌ ರೈಲ್ವೆ ತಂಡ ಪ್ರಜಾವಾಣಿ ಚಿತ್ರ   

ಮೈಸೂರು: ವೆಸ್ಟರ್ನ್‌ ರೈಲ್ವೆ ತಂಡದವರು ಶುಕ್ರವಾರ ಇಲ್ಲಿ ಕೊನೆಗೊಂಡ ಮಹಿಳಾ ಪ್ರೊ ಕ್ರಿಕೆಟ್ ಲೀಗ್ ಟಿ-20 ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟರ್ನ್‌ ರೈಲ್ವೆ ಏಳು ರನ್‌ಗಳಿಂದ ಸೌತ್‌ ಸೆಂಟ್ರಲ್‌ ರೈಲ್ವೆ ತಂಡವನ್ನು ಮಣಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ವೆಸ್ಟರ್ನ್‌ ರೈಲ್ವೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 108 ರನ್‌ ಗಳಿಸಿತು. 37 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 34 ರನ್‌ ಗಳಿಸಿದ ಅನಿತಾ ಲೋಧಿ ತಂಡಕ್ಕೆ ನೆರವಾದರು. ಅನಘಾ ದೇಶಪಾಂಡೆ 25 ರನ್ ಕಲೆಹಾಕಿದರು. ಗೌಹರ್‌ ಸುಲ್ತಾನ (20ಕ್ಕೆ 4) ಮತ್ತು ವಿ.ಎಂ.ಕಾವ್ಯಾ (12ಕ್ಕೆ 2) ಅವರು ಸೌತ್‌ ಸೆಂಟ್ರಲ್‌ ರೈಲ್ವೆ ತಂಡದ ಪರ ಬೌಲಿಂಗ್‌ನಲ್ಲಿ ಪ್ರಭಾವಿ ಎನಿಸಿದರು.

ಸಾಧಾರಣ ಗುರಿ ಬೆನ್ನಟ್ಟಿದ ಸೌತ್‌ ಸೆಂಟ್ರಲ್‌ ರೈಲ್ವೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 102 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ವಾಗತಿಕಾ ರತ್‌ (40)  ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು. ವಿಜೇತ ತಂಡಕ್ಕೆ ₹ 50 ಸಾವಿರ ಮತ್ತು ರನ್ನರ್‌ ಅಪ್‌ ತಂಡಕ್ಕೆ ₹ 25 ಸಾವಿರ ನಗದು ಬಹುಮಾನ ದೊರೆಯಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ವೆಸ್ಟರ್ನ್‌ ರೈಲ್ವೆ : 20 ಓವರ್‌ಗಳಲ್ಲಿ 8 ವಿಕೆಟ್‌ಗೆ 108 (ಅನಿತಾ ಲೋಧಿ 34, ಅನಘಾ ದೇಶಪಾಂಡೆ 25, ಸುಲಕ್ಷಣಾ ನಾಯ್ಕ್‌ 18, ಅನುಜಾ ಪಾಟೀಲ್‌ 12, ಗೌಹರ್‌ ಸುಲ್ತಾನ 20ಕ್ಕೆ 4, ವಿ.ಎಂ.ಕಾವ್ಯಾ 12ಕ್ಕೆ 2)
ಸೌತ್‌ ಸೆಂಟ್ರಲ್‌ ರೈಲ್ವೆ : 20 ಓವರ್‌ಗಳಲ್ಲಿ 8 ವಿಕೆಟ್‌ಗೆ 102 ರನ್‌ (ಸ್ವಾಗತಿಕಾ ರತ್‌ 40, ಶ್ರಾವಂತಿ ನಾಯ್ಡು 14, ಸೀಮಾ 17ಕ್ಕೆ 1, ಅನುಜಾ ಪಾಟೀಲ್‌ 11ಕ್ಕೆ 1)
ಫಲಿತಾಂಶ: ವೆಸ್ಟರ್ನ್‌ ರೈಲ್ವೆಗೆ 7 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.