ನವದೆಹಲಿ (ಪಿಟಿಐ): ಭಾರತದ ಎನ್. ಸೋನಿಯಾ ಚಾನು ದಕ್ಷಿಣ ಕೊರಿಯದಲ್ಲಿ ನಡೆಯುತ್ತಿರುವ ಏಷ್ಯನ್ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಮಂಗಳವಾರ ನಡೆದ ಮಹಿಳೆಯರ 48 ಕೆ.ಜಿ. ವಿಭಾಗದ ಸ್ಪರ್ಧೆಯ ಸ್ನ್ಯಾಚ್‌ನಲ್ಲಿ ಅವರು 75 ಕೆ.ಜಿ ಭಾರ ಎತ್ತುವ ಮೂಲಕ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು. ಕ್ಲೀನ್ ಮತ್ತು ಜರ್ಕ್‌ನಲ್ಲಿ 100 ಕೆ.ಜಿ ಭಾರ ಎತ್ತಿದರು. ಈ ಮೂಲಕ ಒಟ್ಟು 175 ಕೆ.ಜಿ. ಭಾರ ಎತ್ತಿ ಐದನೇ ಸ್ಥಾನದಲ್ಲಿ ನಿಂತರು.
ಪ್ರತಿ ವಿಭಾಗದ ಸ್ಪರ್ಧೆಯಲ್ಲಿ ಮೂರು ಪದಕಗಳನ್ನು ನೀಡಲಾಗುತ್ತಿದೆ. ಇದರಿಂದ ಸ್ನ್ಯಾಚ್ ವಿಭಾಗದಲ್ಲಿ ಸೋನಿಯಾಗೆ ಕಂಚು ಲಭಿಸಿತು. ಇದೇ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇನ್ನೊಬ್ಬಳು ಸ್ಪರ್ಧಿ ಕೆ. ಸಂಜಿತಾ ಚಾನು (ಒಟ್ಟು 162 ಕೆ.ಜಿ) 11ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಸ್ನ್ಯಾಚ್‌ನಲ್ಲಿ 71 ಕೆ.ಜಿ. ಭಾರ ಎತ್ತಿದ ಸಂಜಿತಾ ಕ್ಲೀನ್ ಮತ್ತು ಜರ್ಕ್‌ನಲ್ಲಿ 91 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾದರು. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 15 ಲಿಫ್ಟರ್‌ಗಳು ಕಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.