ADVERTISEMENT

ಶಾಲಾ ವಿದ್ಯಾರ್ಥಿಗಳ ರಾಜ್ಯ ಕುಸ್ತಿ ಚಾಂಪಿಯನ್‌ಷಿಪ್: ಬೆಳಗಾವಿ ಜಿಲ್ಲೆ ಪಾರಮ್ಯ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಧಾರವಾಡ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳು ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆರಂಭಗೊಂಡ ಶಾಲಾ ಬಾಲಕರ ರಾಜ್ಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾರಮ್ಯ ಮೆರೆದಿದ್ದಾರೆ.

ಹೈಸ್ಕೂಲ್ ಹಂತದ 42 ಕೆ.ಜಿ. ವಿಭಾಗದಲ್ಲಿ ಶರತ್ ಬಾಬು (ಶಿವಮೊಗ್ಗ), ತೌಸಿಫ್ ನದಾಫ (ಬೆಳಗಾವಿ), ಕಾಮಣ್ಣ ಎಸ್.ಎನ್ (ವಿಜಾಪುರ) ಹಾಗೂ ಟಿ.ಎಸ್. ಬಳ್ಳಾರಿ (ಗದಗ), 46 ಕೆ.ಜಿ. ವಿಭಾಗದಲ್ಲಿ ತಿಪ್ಪಣ್ಣ ಬಿ.ಜಿ. (ಚಿಕ್ಕೋಡಿ), ಶಿವಾನಂದ ತಳವಾರ (ಬೆಳಗಾವಿ), ರವಿಕಾಂತ ಪೂಜಾರಿ (ವಿಜಾಪುರ) ಹಾಗೂ ಮಂಜುನಾಥ ಡಿ. (ದಾವಣಗೆರೆ), 50 ಕೆ.ಜಿ. ವಿಭಾಗದಲ್ಲಿ ಮುತ್ತಪ್ಪ ಜಡಿ (ಗದಗ), ಮಲಗೌಡ ಪಾಟೀಲ (ಚಿಕ್ಕೋಡಿ), ರವಿ ಕೆಂಪಣ್ಣವರ (ಬೆಳಗಾವಿ), ಹಾಗೂ ಪ್ರಕಾಶ ಬಿ.ಆರ್. (ದಾವಣಗೆರೆ), 54 ಕೆ.ಜಿ. ವಿಭಾಗದಲ್ಲಿ ಕೃಷ್ಣಮೂರ್ತಿ (ಚಿಕ್ಕಬಳ್ಳಾಪುರ), ಪ್ರಕಾಶ ಕೆ.ಬಿ. (ಚಿಕ್ಕೋಡಿ), ಕೆಂಚಪ್ಪ ಎಸ್ (ದಾವಣಗೆರೆ) ಹಾಗೂ ಮಂಜುನಾಥ ಬಿ. (ದಾರವಾಡ), 58 ಕೆ.ಜಿ. ವಿಭಾಗದಲ್ಲಿ ಬಸವರಾಜ ಎಸ್.ಬಿ. (ಬೆಳಗಾವಿ), ನಿಜಾಮುದ್ದೀನ್ (ಮಂಗಳೂರು), ವಿಷ್ಣುಕುಮಾರ್ ಪಿ (ಧಾರವಾಡ), ಚಂದ್ರಶೇಖರ ಎಸ್ (ದಾವಣಗೆರೆ), 63 ಕೆ.ಜಿ. ವಿಭಾಗದಲ್ಲಿ ಪ್ರೇಮ್ ಕುಮಾರ್ (ಬೀದರ್), ಉಮೇಶ ಬಿ (ಮಂಗಳೂರು), ಶಿವಾನಂದ ಬಿ (ದಾವಣಗೆರೆ) ಹಾಗೂ ಗುರುಲಿಂಗಯ್ಯ (ಚಿಕ್ಕೋಡಿ), 69 ಕೆ.ಜಿ. ವಿಭಾಗದಲ್ಲಿ ಅಜಿಂಕ ಮೋಸೆ (ಬಾಗಲಕೋಟೆ), ಮಹಾದೇವ (ದಾವಣಗೆರೆ), ಲಕ್ಷ್ಮಣ ತಳವಾರ (ಧಾರವಾಡ), ಶಶಿಕುಮಾರ (ಬಳ್ಳಾರಿ) ಹಾಗೂ 76 ಕೆ.ಜಿ. ವಿಭಾಗದಲ್ಲಿ ಬರತ್ ಬಿ. (ಚಿಕ್ಕಮಗಳೂರು), ಮಂಜುನಾಥ ಎಸ್.ವಿ (ಶಿವಮೊಗ್ಗ), ಮಂಜುನಾಥ ಟಿ (ದಾವಣಗೆರೆ) ಹಾಗೂ ನಿರ್ಪಾಡಿ ದಡ್ಡಿ (ಚಿಕ್ಕೋಡಿ) ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಪ್ರಾಥಮಿಕ ಶಾಲಾ ಹಂತದ 32 ಕೆ.ಜಿ. ವಿಭಾಗದಲ್ಲಿ ಸಚಿನ್ ಎ (ಬೆಳಗಾವಿ), ಕುಮಾರ ಧರೂರ (ಚಿಕ್ಕೋಡಿ), ಸದಾಶಿವ ಎನ್ (ಬಾಗಲಕೋಟೆ) ಹಾಗೂ ಪ್ರವೀಣ ಎಸ್.ಕೆ.(ಶಿರಸಿ) ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ADVERTISEMENT

35 ಕೆ.ಜಿ. ವಿಭಾಗದಲ್ಲಿ ಲಕ್ಷ್ಮಣ ಎಸ್.ಜಿ (ಬೆಳಗಾವಿ), ಕೃಷ್ಣ ಗಸ್ತಿ (ಚಿಕ್ಕೋಡಿ), ಹನುಮಂತ ಬೆನ್ನಿ (ಗದಗ) ಹಾಗೂ ಅರ್ಜುನ ಹುಲಕುರ್ಕಿ (ಬಾಗಲಕೋಟೆ), 38 ಕೆ.ಜಿ. ವಿಭಾಗದಲ್ಲಿ ಅನಿಲ ದಳವಾಯಿ (ಗದಗ), ನಾಗರಾಜ ಎಚ್ (ಮಂಗಳೂರು), ಅರುಣ ಎಂ (ಬೆಳಗಾವಿ), ಅಶೋಕ (ಬೆಂಗಳೂರು ಗ್ರಾ.), 41 ಕೆ.ಜಿ. ವಿಭಾಗದಲ್ಲಿ ಈರಯ್ಯ (ಬಾಗಲಕೋಟೆ), ಅಜಿತ್ ತೊಣಶ್ಯಾಳ (ಬೆಳಗಾವಿ), ವೆಂಕಟೇಶ ಬಿ.ಜೆ (ದಾವಣಗೆರೆ) ಹಾಗೂ ವೀರಶೆಟ್ಟಿ (ಗುಲ್ಬರ್ಗ) ಸೆಮಿಫೈನಲ್ ತಲುಪಿದರು.

45 ಕೆ.ಜಿ. ವಿಭಾಗದಲ್ಲಿ ಅಬ್ದುಲ್ ಸಲಾಂ (ಮಂಗಳೂರು), ರಾಜು (ಬೆಳಗಾವಿ), ಆಕಾಶ ಬಿ. (ದಾವಣಗೆರೆ), ಅರುಣ ಕುಮಾರ್ (ಬಾಗಲಕೋಟೆ), 49 ಕೆ.ಜಿ. ವಿಭಾಗದಲ್ಲಿ ಅಮಿತ್ ಜಿ (ಉಡುಪಿ), ಮಲ್ಲಪ್ಪ ಎಚ್.ಕೆ (ದಾವಣಗೆರೆ), ಮಹೇಶ ಕಾಂಬ್ಳೆ (ಬಾಗಲಕೋಟೆ), ವಿನೋದ ಡಿ.ವಿ (ಬೆಳಗಾವಿ) ಸೆಮಿಫೈನಲ್ ತಲುಪಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.