ADVERTISEMENT

ಶುಕ್ಲಾ ನಿಧನಕ್ಕೆ ಕ್ರೀಡಾರಂಗ ಕಂಬನಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:48 IST
Last Updated 11 ಜೂನ್ 2013, 19:48 IST

ನವದೆಹಲಿ (ಪಿಟಿಐ/ ಐಎಎನ್‌ಎಸ್):  ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ)ಯ ಮಾಜಿ ಅಧ್ಯಕ್ಷ  ವಿದ್ಯಾ ಚರಣ್ ಶುಕ್ಲಾ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಐಒಎ, `ದೇಶದ ಕ್ರೀಡಾರಂಗವು ಒಬ್ಬ ಸಮರ್ಥ ಆಡಳಿತಗಾರ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಿದೆ' ಎಂದು ಬಣ್ಣಿಸಿದೆ.

`ದೇಶದ ಕ್ರೀಡಾರಂಗವು ಒಬ್ಬ ಮಾರ್ಗದರ್ಶಕ ಹಾಗೂ ಸಲಹೆಗಾರರನ್ನು ಕಳೆದುಕೊಂಡಿದೆ' ಎಂದು ಅಮಾನತುಗೊಂಡಿರುವ ಐಒಎ ಅಧ್ಯಕ್ಷ ಅಭಯ ಸಿಂಗ್ ಚೌಟಾಲ ಹಾಗೂ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.