ಬೆಂಗಳೂರು: ಅಭಿಜಿತ್ (7ಕ್ಕೆ4) ಕರಾರುವಾಕ್ಕಾದ ಬೌಲಿಂಗ್ ನೆರವಿನಿಂದ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ (ಎಸ್‌ಜೆಸಿಸಿ) ತಂಡದವರು ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಚೊಚ್ಚಲ ಕಾಲೇಜ್ ಪ್ರೀಮಿಯರ್ ಲೀಗ್(ಸಿಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎಸ್‌ಬಿಎಂಜೆಸಿ ತಂಡದ ವಿರುದ್ಧ 19 ರನ್‌ಗಳ ಗೆಲುವು ಪಡೆದರು. ಈ ಮೂಲಕ ಎಸ್‌ಜೆಸಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
ಸೇಂಟ್ ಜೋಸೆಫ್ ವೈದ್ಯಕೀಯ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್‌ಜೆಸಿಸಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 135 ರನ್ ಗಳಿಸಿತು. ಇದಕ್ಕೆ ಆಶೀಶ್ ಅವರ ಚುರುಕಾದ ಬ್ಯಾಟಿಂಗ್ ಕಾರಣ. ಇದಕ್ಕುತ್ತರವಾಗಿ ಎಸ್‌ಬಿಎಂಜೆಸಿ ತಂಡ ನಿಗದಿತ ಓವರ್‌ಗಳಲ್ಲಿ 120 ರನ್ ಗಳಿಸಿ ಸರ್ವ ಪತನ ಕಂಡಿತು.
ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎಸ್‌ಜೆಸಿಸಿ, ಎಸ್‌ಬಿಎಂಜೆಸಿ, ಲೊಯೊಲಾ ಕಾಲೇಜ್ ಹಾಗೂ ವಿಜಯಾ ಕಾಲೇಜು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ನಾಲ್ಕರ ಘಟ್ಟದ ಪಂದ್ಯಗಳು ಭಾನುವಾರ ಎನ್‌ಆರ್‌ಐ ಕ್ರೀಡಾಂಗಣದಲ್ಲಿ ನಡೆಯಲಿವೆ.
ಸಂಕ್ಷಿಪ್ತ ಸ್ಕೋರು: ಎಸ್‌ಜೆಸಿಸಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 135 (ಆಶೀಶ್ ದಾರ್ 58, ಆನಂದ್ 27; ನಿಖಿತ್ 20ಕ್ಕೆ3). ಎಸ್‌ಬಿಎಂಜೆಸಿ 20 ಓವರ್‌ಗಳಲ್ಲಿ 120 (ಕೆ. ಅಬ್ಬಾಸ್ 63; ಅಭಿಜಿತ್ 7ಕ್ಕೆ4, ಭರತ್ 12ಕ್ಕೆ2). ಫಲಿತಾಂಶ: ಎಸ್‌ಜೆಸಿಸಿ ತಂಡಕ್ಕೆ 15 ರನ್ ವಿಜಯ.
ಎಸ್‌ಬಿಎಂಜೆಸಿ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 231 (ಬಿ. ದಿನೇಶ್ ಔಟಾಗದೇ 101, ಕರುಣ್ ನಾಯರ್ 60). ಎಸ್‌ಬಿಎಂಜೆಸಿಇ 20 ಓವರ್‌ಗಳಲ್ಲಿ 109 (ಶಶಿಂಧರ್ 15ಕ್ಕೆ3, ಜಹೋರ್ 4ಕ್ಕೆ2, ಭಾವೇಶ್ 24ಕ್ಕೆ2). ಫಲಿತಾಂಶ: ಎಸ್‌ಬಿಎಂಜೆಸಿ ತಂಡಕ್ಕೆ 122 ರನ್ ಗೆಲುವು.
ಲೊಯೊಲಾ ಕಾಲೇಜ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 160 (ಫ್ರಾನ್ಸಿಸ್ ಔಟಾಗದೇ 43, ಮುರಳಿ 37; ಆನಂದ್ 10ಕ್ಕೆ2). ಪ್ರೆಸಿಡೆಂಟ್ ಕಾಲೇಜ್: 19 ಓವರ್‌ಗಳಲ್ಲಿ 7 ವಿಕೆಟ್‌ಗೆ 164 (ಸುಹೇಲ್ ಔಟಾಗದೇ 63, ಎಸ್. ಅಭಿಜಿತ್ 35; ರಜನಿಕಾಂತ್ 21ಕ್ಕೆ4) ಫಲಿತಾಂಶ: ಪ್ರೆಸಿಡೆಂಟ್ ಕಾಲೇಜ್‌ಗೆ 3 ವಿಕೆಟ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.