
ಪ್ರಜಾವಾಣಿ ವಾರ್ತೆಚೆನ್ನೈ (ಐಎಎನ್‌ಎಸ್): ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇತರ ಒಂಬತ್ತು ತಂಡಗಳಿಗಿಂತ ಬಲಿಷ್ಠವಾಗಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
‘ನಮ್ಮ ತಂಡದಲ್ಲಿ ಹೆಚ್ಚಿನ ಬದಲಾವಣೆ ಉಂಟಾಗಿಲ್ಲ. ಕಳೆದ ಮೂರು ವರ್ಷ ಆಡಿದ ಹಲವು ಆಟಗಾರರು ಈ ಬಾರಿಯೂ ತಂಡದಲ್ಲಿದ್ದಾರೆ. ಇದರಿಂದ ಇತರ ಫ್ರಾಂಚೈಸಿಗಳಿಗೆ ಹೋಲಿಸಿ ನೋಡಿದರೆ ನಾವೇ ಬಲಿಷ್ಠ’ ಎಂದರು.
‘ಇತರ ತಂಡಗಳು ಹೆಚ್ಚಿನ ಬದಲಾವಣೆಯೊಂದಿಗೆ ಈ ಬಾರಿ ಆಡುತ್ತಿದೆ. ಅವರಿಗೆ ಪರಸ್ಪರ ಹೊಂದಿಕೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕು. ನಮಗೆ ಅಂತಹ ಸಮಸ್ಯೆಯಿಲ್ಲ’ ಎಂದು ಫ್ಲೆಮಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.