ADVERTISEMENT

ಸೆಮಿಫೈನಲ್‌ಗೆ ಸಿಂಧು

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 19:30 IST
Last Updated 13 ಜುಲೈ 2012, 19:30 IST

ಉಡುಪಿ: ಅಗ್ರ ಶ್ರೇಯಾಂಕದ ಜಿ.ಎಂ.ನಿಶ್ಚಿತಾ, ಫೈವ್‌ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲೇ ಹೊರಬಿದ್ದರು. ಶುಕ್ರವಾರ ನಿಶ್ಚಿತಾ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದ ಆರನೇ ಶ್ರೇಯಾಂಕದ ಸಿಂಧು ಭಾರದ್ವಾಜ್, ನಾಲ್ಕನೇ ಶ್ರೇಯಾಂಕದ ಮಹಿಮಾ ಅಗರವಾಲ್ ಮತ್ತು ಎರಡನೇ ಶ್ರೇಯಾಂಕದ ವಿ.ರುತ್‌ಮಿಶಾ ಜತೆ ಮಹಿಳಾ ಸಿಂಗಲ್ಸ್ ನಾಲ್ಕರ ಘಟ್ಟಕ್ಕೆ ಮುನ್ನಡೆದರು.

ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಸಿಂಧು 21-12, 21-17ರಲ್ಲಿ ನಿಶ್ಚಿತಾ ಅವರನ್ನು ಹಿಮ್ಮೆಟ್ಟಿಸಿದ್ದು ನೇರ ಸೆಟ್‌ಗಳಿಂದಲೇ. ಮಹಿಮಾ 22-20, 21-17ರಲ್ಲಿ ದೇವಿಕಾ ರವೀಂದ್ರ ವಿರುದ್ಧ, ರುತ್‌ಮಿಶಾ 21-16, 21-13 ರಲ್ಲಿ ಪಾರ್ವತಿ ಕೃಷ್ಣನ್ ವಿರುದ್ಧ ಜಯಗಳಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಅಭಿಜಿತ್ ನೈಂಪಲ್ಲಿ (ಕೆನರಾ ಬ್ಯಾಂಕ್) ನಿರ್ಗಮಿಸಿದರು. ಉಳಿದಂತೆ ಅಗ್ರ ಶ್ರೇಯಾಂಕದ ಆದರ್ಶ್ ಕುಮಾರ್, ಆರ್.ಎನ್.ಸೂರಜ್, ರಜಸ್ ಜವಾಳಕರ್ (ಬೆಳಗಾವಿ), ವೆಂಕಟೇಶ ಕಾಮತ್ (ಮಣಿಪಾಲ), ಅಮಿತ್ ಕುಮಾರ್, ಕೆ.ಕಾರ್ತಿಕೇಯ, ರೋಹನ್ ಕ್ಟಾಸ್ಟೆಲಿನೊ, ಎಸ್.ಡೇನಿಯಲ್ ಫರಿದ್ ಎಂಟರ ಘಟ್ಟಕ್ಕೆ ಮುನ್ನಡೆದ್ದ್ದಿದಾರೆ.

ಡೇನಿಯಲ್ ಮುನ್ನಡೆ: 19 ವರ್ಷದೊಳಗಿನ ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕದ ಕಿರಣ್ ಮೌಳಿ 21-19, 23-21ರಲ್ಲಿ ಕೆ.ರಾಜು ವಿರುದ್ಧ ಗೆಲ್ಲಲು ಎಲ್ಲ ಸಾಮರ್ಥ್ಯ ಬಳಸಬೇಕಾಯಿತು. ಎಂಟನೇ ಶ್ರೇಯಂಕದ ರಜಸ್ ಜವಾಳಕರ್ 21-13, 21-8 ರಲ್ಲಿ ನಾಲ್ಕನೇ ಶ್ರೇಯಾಂಕದ ಹೇಮಂತ್ ಗೌಡ ವಿರುದ್ಧ, ಡೇನಿಯಲ್ ಫರಿದ್ 21-9, 21-9 ರಲ್ಲಿ ಆಕಾಶರಾಜ್ ಮೂರ್ತಿ ವಿರುದ್ಧ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.