ADVERTISEMENT

ಸೇಂಟ್ ಜೋಸೆಫ್ಸ್ ಹೈಸ್ಕೂಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಬೆಂಗಳೂರು: ಸೇಂಟ್ ಜೋಸೆಫ್ಸ್ ಬಾಲಕರ ಹೈಸ್ಕೂಲ್ ತಂಡದವರು ಇಲ್ಲಿ ನಡೆಯುತ್ತಿರುವ ಫಾದರ್ ಎರಿಕ್ ವಾಜ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ 1-0 ರಲ್ಲಿ ವಿದ್ಯಾಶಿಲ್ಪ ಅಕಾಡೆಮಿ ವಿರುದ್ಧ ಜಯ ಪಡೆದರು.

ಗುರುವಾರ ನಡೆದ ಪಂದ್ಯದ 9ನೇ ನಿಮಿಷದಲ್ಲಿ ದೇಶ್ ಮುತ್ತಣ್ಣ ವಿಜೇತ ತಂಡಕ್ಕೆ ಗೋಲು ತಂದಿತ್ತರು.
ಸೀನಿಯರ್ ಬಾಲಕರಿಗಾಗಿ ನಡೆಯುತ್ತಿರುವ ಸೆಂಟಿನರಿ ಶೀಲ್ಡ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಕೆಥೆಡ್ರಲ್ ಹೈಸ್ಕೂಲ್ ಮತ್ತು ಬಿಷಪ್ ಕಾಟನ್ ಬಾಲಕರ ಶಾಲಾ ತಂಡಗಳು 2-2 ಗೋಲುಗಳ ಡ್ರಾ ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.