ಕ್ಯಾನ್‌ಬೆರಾ (ಪಿಟಿಐ): ನಾನು ರನ್ ಗಳಿಸದೇ ಔಟಾಗಿದ್ದು ಪಂದ್ಯದಲ್ಲಿ ನಮ್ಮ ತಂಡ ಸೋಲಲು ಪ್ರಮುಖ ಕಾರಣ ವಾಯಿತು ಎಂದು ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ ಹೇಳಿದರು.
ಬುಧವಾರ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಶತಕ ಗಳಿಸಿದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರು ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದ್ದರು. ಆದರೆ, ಧವನ್ ಔಟಾದ ನಂತರ ಕೇವಲ 46 ರನ್‌ಗಳ ಅಂತರದಲ್ಲಿ ಒಂಬತ್ತು ವಿಕೆಟ್‌ಗಳು ಪತನಗೊಂಡಿದ್ದವು. ನಾಲ್ಕನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ದೋನಿ ಸೊನ್ನೆ ಸುತ್ತಿದ್ದರು.
‘ಆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ನಾನು ಬಂದಾಗ ತಂಡವು ಗೆಲುವಿನ ಗೆರೆಯ ಹತ್ತಿರ ಇತ್ತು. ಅಂತಹ ಪರಿಸ್ಥಿತಿ ಯನ್ನು ತಂಡವನ್ನು ಜಯದ ದಡ ಸೇರಿಸುವುದು ನನ್ನ ಜವಾಬ್ದಾರಿಯಾ ಗಿತ್ತು. ಆದರೆ, ನಾನು ಅದನ್ನು ನಿಭಾಯಿ ಸುವಲ್ಲಿ ವಿಫಲನಾದೆ’ ಎಂದು ದೋನಿ ತಪ್ಪೊಪ್ಪಿ ಕೊಂಡರು.
‘ಇದೆಲ್ಲದರ ಹೊರತಾಗಿಯೂ ನಮ್ಮ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಗಳು ಉತ್ತಮ ಪ್ರದರ್ಶನ ನೀಡಿದ್ದು ಶ್ಲಾಘನೀಯ. ರೋಹಿತ್ ಮತ್ತು ಧವನ್ ಉತ್ತಮ ಆರಂಭ ನೀಡಿದರು. ನಂತರ ವಿರಾಟ್ ಆಕರ್ಷಕ ಬ್ಯಾಟಿಂಗ್ ಮನ ಗೆದ್ದಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.